ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ವಹಿವಾಟು ನಡೆಸಿದ ಬಂದರು

ಕಾರವಾರಕ್ಕೆ ಈ ವರ್ಷ ಬಂದ ಹಡಗುಗಳು 157: ವಿವಿಧ ಯೋಜನೆಗಳಿಗೂ ಚಾಲನೆ
Last Updated 5 ಏಪ್ರಿಲ್ 2019, 14:26 IST
ಅಕ್ಷರ ಗಾತ್ರ

ಕಾರವಾರ:ಇಲ್ಲಿನವಾಣಿಜ್ಯ ಬಂದರು ಈ ವರ್ಷ (2018–19) ದಾಖಲೆಯ ವಹಿವಾಟು ನಡೆಸಿದೆ. ಒಟ್ಟು ₹ 16.69 ಕೋಟಿಆದಾಯ ಗಳಿಸಿ, ಕಳೆದ ವರ್ಷಕ್ಕಿಂತ ಶೇ 43.89ರಷ್ಟು ಪ್ರಗತಿ ಕಂಡಿದೆ. ಬಂದರಿನ ಜಟ್ಟಿಯಲ್ಲಿದ್ದ ಹೂಳಿನ ತೆರವು ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಬರಲು ಸಾಧ್ಯವಾಯಿತು. ಇದರಿಂದಾಗಿ ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಂದರು ಅಧಿಕಾರಿ ಕ್ಯಾಪ್ಟನ್ ಸಿ.ಸ್ವಾಮಿ, ‘ಸರಕು ಸಾಗಣೆಯ 157 ಹಡಗುಗಳು ಈ ಬಾರಿ ಕಾರವಾರ ಬಂದರಿಗೆ ಬಂದಿವೆ. ಕಳೆದ ಬಾರಿ 133 ಬಂದಿದ್ದವು.ಈ ಬಾರಿಶೇ 15.2ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಕಸ್ಟಮ್ಸ್ ಇಲಾಖೆಯು₹ 283.60 ಕೋಟಿ ಆದಾಯ ಗಳಿಸಿದೆ. ಇಲಾಖೆಯು ಬರೋಬ್ಬರಿ ₹ 152 ಕೋಟಿ ಆದಾಯವನ್ನು ಕೇವಲ ಡಾಂಬರು ಆಮದು ಚಟುವಟಿಕೆಗಳಿಂದಲೇ ಪಡೆದಿದೆ ಎನ್ನುವುದು ಗಮನಾರ್ಹ. ₹ 2.99 ಕೋಟಿ ಸೇವಾ ತೆರಿಗೆಯೂ ಪಾವತಿಯಾಗಿದೆ’ ಎಂದರು.

ಕಾರವಾರ ವಾಣಿಜ್ಯ ಬಂದರನ್ನು ಕೇಂದ್ರ ಸರ್ಕಾರವು ‘ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ’ (VTMS) ಅಳವಡಿಸಲು ಆಯ್ಕೆ ಮಾಡಿದೆ. ಇದಕ್ಕೆ ತಾಂತ್ರಿಕ ಮತ್ತು ಹಣಕಾಸು ಸೌಲಭ್ಯಕ್ಕಾಗಿ ₹ 11.08 ಕೋಟಿ ನಿಗದಿ ಮಾಡಿದೆ. ಇದರಿಂದ ಬಂದರಿನಲ್ಲಿಭದ್ರತೆ ಹೆಚ್ಚಲಿದೆ. ಈಆರ್ಥಿಕ ವರ್ಷದಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರವು ನಮ್ಮ ಬಂದರಿಗೆತೈಲ ಮಾಲಿನ್ಯ ನಿಯಂತ್ರಣದ ಪರಿಕರಗಳನ್ನೂ ನೀಡಲಿದೆ. ಇದಕ್ಕಾಗಿ ₹ 1.25 ಕೋಟಿ ನೀಡಿದೆ.ಇದರೊಂದಿಗೆ ರಾಜ್ಯ ಸರ್ಕಾರವೂ ₹ 2.5 ಕೋಟಿ ಮೊತ್ತದ ಪರಿಕರಗಳನ್ನು ನೀಡಿದೆ. ಅಲ್ಲದೇ ರಾಜ್ಯ ಸರ್ಕಾರವು ಬಂದರಿಗೆ ಖಾಸಗಿ ಸಶಸ್ತ್ರ ಭದ್ರತಾ ಸಿಬ್ಬಂದಿ ನಿಯೋಜನೆ ಅನುಮತಿ ನೀಡಿದೆ. ಇದಕ್ಕಾಗಿ ವರ್ಷಕ್ಕೆ ₹ 60 ಲಕ್ಷ ನಿಗದಿ ಮಾಡಿದೆ’ ಎಂದರು.

‘ಬಂದರು ಬಳಕೆದಾರರಿಗೆ ರಾತ್ರಿ ಮಾರ್ಗದರ್ಶನ ಸೌಲಭ್ಯಗಳನ್ನುಸುಮಾರು ₹ 1 ಕೋಟಿ ವೆಚ್ಚದಲ್ಲಿ ನೀಡಲಾಗುತ್ತದೆ. ಇದರ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಸುಮಾರು ₹ 20 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಪರಿಕರಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕಾರವಾರ ಮತ್ತು ಬೇಲೇಕೇರಿ ಬಂದರುಗಳಲ್ಲಿ ಹೆಚ್ಚು ದೂರದವರೆಗೆ ದೃಶ್ಯಗಳನ್ನು ಸೆರೆಹಿಡಿಯುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದೂ ತಿಳಿಸಿದರು.

ಬಂದರು ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ ಸಲುವಾಗಿ ಕರ್ನಾಟಕ ಮೆರಿಟೈಮ್ ಬೋರ್ಡ್‌ ಈಚೆಗೆ ರಚನೆಯಾಗಿದೆ. ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ನೇಮಕವಾಗಿದ್ದು, ಕಾರವಾರದಲ್ಲಿ ಕಚೇರಿಯಿರಲಿದೆ. ಇದರಿಂದ ಬಂದರು ಚಟುವಟಿಕೆಗಳಿಗೆ ಸಾಕಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಕಿ ಅಂಶ

ಕಾರವಾರ ಬಂದರು ಚಟುವಟಿಕೆ

* 7,56,434 ಮೆಟ್ರಿಕ್ ಟನ್ಆಮದು ಮಾಡಿಕೊಂಡ ಸರಕು

* 1,83,853 ಮೆಟ್ರಿಕ್ ಟನ್ರಫ್ತು ಮಾಡಿದ ಸರಕು

* 9,40,287 ಮೆಟ್ರಿಕ್ ಟನ್ ನಿರ್ವಹಿಸಿದ ಒಟ್ಟು ಸರಕು

* ₹ 16,69,42,000 ಬಂದರು ಗಳಿಸಿದ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT