ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಕ್ಕಾಗಿ ಎರಡು ಚೀಟಿ ಹೊಂದುವಂತಿಲ್ಲ

ಕಾರವಾರ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ
Last Updated 5 ಅಕ್ಟೋಬರ್ 2019, 12:16 IST
ಅಕ್ಷರ ಗಾತ್ರ

ಕಾರವಾರ: ‘ಒಂದು ಮನೆಯಲ್ಲಿ ಒಂದೇವಿದ್ಯುತ್ ಮೀಟರ್ ಇದ್ದು, ಎರಡು ಕುಟುಂಬಗಳ ವಾಸ ಮಾಡುತ್ತಿದ್ದರೆ ಪ್ರತ್ಯೇಕ ಪಡಿತರ ಚೀಟಿ ಕೊಡಲು ಸಾಧ್ಯವಿದೆ. ಒಂದುವೇಳೆ ಆ ಕುಟುಂಬಗಳು ಒಟ್ಟಾಗಿ ಅಡುಗೆ ಮಾಡುತ್ತಿದ್ದರೆ ಚೀಟಿಯನ್ನುರದ್ದು ಮಾಡಲಾಗುತ್ತದೆ. ಪಡಿತರ ಪಡೆಯುವ ಸಲುವಾಗಿಯೇ ಪ್ರತ್ಯೇಕ ಚೀಟಿಮಾಡಿಕೊಳ್ಳುವಂತಿಲ್ಲ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಎಸ್.ವಿ.ನಾಯ್ಕ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು. ಇದಕ್ಕೂ ಮೊದಲು ಅಧ್ಯಕ್ಷೆ ಪ್ರಮೀಳಾ ನಾಯ್ಕ ಮಾತನಾಡಿ, ‘ಒಂದು ಮನೆಯಲ್ಲಿ ಒಂದೇ ವಿದ್ಯುತ್ ಮೀಟರ್ ಇದ್ದು, ಎರಡು ಕುಟುಂಬಗಳು ವಾಸಿಸುತ್ತಿದ್ದರೆ ಪ್ರತ್ಯೇಕ ಪಡಿತರ ಚೀಟಿಗಳನ್ನು ನೀಡುವುದಿಲ್ಲ ಎಂಬ ವದಂತಿಯಿದೆ. ಈ ಬಗ್ಗೆ ಸ್ಪಷ್ಟಪಡಿಸಿ’ ಎಂದು ಸೂಚಿಸಿದ್ದರು.

‘ನೆರೆಯಿಂದಆರುಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ. ದುರಸ್ತಿಗೆ ತಲಾ ₹2 ಲಕ್ಷ ಬಿಡುಗಡೆಯಾಗಿದೆ. ಕೆಲವು ಕಾಮಗಾರಿ ಮುಗಿದಿದೆ. ಪೋಷಣಾ ಅಭಿಯಾನದ ದಾಖಲಾತಿ ನೋಂದಣಿಯಲ್ಲಿಜಿಲ್ಲೆಯುರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಗಿಡ್ನಂದಿತಿಳಿಸಿದರು.

ತಾಲೂಕಿನಲ್ಲಿ ನೆರೆಯಿಂದ ರಸ್ತೆ, ಸೇತುವೆ, ಕಟ್ಟಡ ಸೇರಿ ಒಟ್ಟು ₹8.50ಕೋಟಿ ಹಾನಿಯಾಗಿದೆ ಎಂದು ಪ್ರಸ್ತಾವ ಸಲ್ಲಿಸಲಾಗಿದೆ. ಈವರೆಗೆ₹ 50 ಲಕ್ಷ ಬಿಡುಗಡೆಯಾಗಿದೆ.ಅದರಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದಸಹಾಯಕ ಕಾರ್ಯಪಾಲಕ ಎಂಜಿನಿಯರ್ಪಿ.ಎನ್.ರಾಣೆತಿಳಿಸಿದರು.

‘ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಿ’:ಗ್ರಾಮೀಣ ಭಾಗದಲ್ಲಿಮೊದಲೇ ತಿಳಿಸದೇವಿದ್ಯುತ್ ಪೂರೈಕೆ ನಿಲ್ಲಿಸದಂತೆ ಪ್ರಮೀಳಾ ನಾಯ್ಕ ಹೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಿರ್ವಹಣೆಗಾಗಿಪ್ರತಿ ಬುಧವಾರ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುತ್ತಿದೆ. ಆದರೆ, ವಾರದ ಎಲ್ಲ ದಿನಗಳಲ್ಲೂ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದರು.

ಹೆಸ್ಕಾಂಸಹಾಯಕ ಕಾರ್ಯಪಾಲಕ ಎಂಜಿನಿಯರ್ಜಿ.ಬಿ.ಇಡೂರಕರ್ ಪ್ರತಿಕ್ರಿಯಿಸಿ, ‘ಮಳೆಗಾಲವಾಗಿದ್ದರಿಂದ ಹಲವೆಡೆ ಮರಗಳು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ. ಶೀಘ್ರವೇ ವಿದ್ಯುತ್ ನೀಡಬೇಕು ಎಂಬ ಉದ್ದೇಶದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿರುತ್ತದೆ. ಸಮರ್ಪಕದುರಸ್ತಿಗಾಗಿ ಅನಿವಾರ್ಯವಾಗಿ ಸಂಪರ್ಕ ಕಡಿತ ಮಾಡಲಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಆನಂದಕುಮಾರ್ ಬಾಲಣ್ಣನವರ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT