ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಲೂ ಫ್ಲ್ಯಾಗ್’ ಪ್ರಮಾಣ ಪತ್ರಕ್ಕೆ ಕಡಲತೀರ ಅಭಿವೃದ್ಧಿ

ಹೊನ್ನಾವರದ ಕಾಸರಕೋಡನ್ನು ಆಯ್ಕೆ ಮಾಡಿಕೊಂಡ ಕೇಂದ್ರ ಸರ್ಕಾರ
Last Updated 18 ಜುಲೈ 2019, 6:15 IST
ಅಕ್ಷರ ಗಾತ್ರ

ಕಾರವಾರ: ಹೊನ್ನಾವರದ ಕಾಸರಕೋಡು ಕಡಲತೀರವನ್ನು ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣ ಪತ್ರ ಪಡೆಯುವ ಸಲುವಾಗಿಅಭಿವೃದ್ಧಿಪಡಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತೀರ್ಮಾನಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಕಡಲತೀರದ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಕಾಪಾಡಿಕೊಂಡು ಬಂದರೆ‘ಬ್ಲೂ ಫ್ಲ್ಯಾಗ್’ ಪ್ರಮಾಣ ಪತ್ರನೀಡಲಾಗುತ್ತದೆ. ಡೆನ್ಮಾರ್ಕ್‌ನ ಸ್ವಯಂ ಸೇವಾ ಸಂಸ್ಥೆ, ‘ಪರಿಸರ ಶಿಕ್ಷಣ ಪ್ರತಿಷ್ಠಾನ’ವು (ಎಫ್‌ಇಇ) 1985ರಿಂದ ಕಡಲತೀರಗಳನ್ನು ಈ ರೀತಿ ಪ್ರಮಾಣೀಕರಿಸುತ್ತಿದೆ. ಕಡಲತೀರದಲ್ಲಿ ಸ್ವಚ್ಛತೆ, ಮೂಲ ಸೌಕರ್ಯ, ಸುರಕ್ಷತೆ ಮತ್ತು ಭದ್ರತೆಯನ್ನು ಇದಕ್ಕೆ ಪ್ರಧಾನ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಈ ಎಲ್ಲವನ್ನೂ ಸಮರ್ಪಕವಾಗಿ ಹೊಂದಿರುವ ಕಡಲತೀರಗಳಲ್ಲಿ ನೀಲಿಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುತ್ತದೆ.ಯಾವುದಾದರೂ ಒಂದರಲ್ಲಿ ಹಿಂದುಳಿದರೂಧ್ವಜವನ್ನು ಕೆಳಗಿಳಿಸಲಾಗುತ್ತದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ಪಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ದೇಶದ 12 ಕಡಲತೀರಗಳನ್ನು ಆಯ್ಕೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ಕಾಸರಕೋಡು ಈಗ ಆರನೇ ಸ್ಥಾನದಲ್ಲಿದೆ. ಒಂದಷ್ಟು ಅಗತ್ಯ ಕಾಮಗಾರಿಗಳನ್ನು ಈಗಾಗಲೇ ಮಾಡಲಾಗಿದೆ. ಉಳಿದವುಗಳನ್ನು ಟೆಂಡರ್ ವಹಿಸಿಕೊಂಡವರು ಇನ್ನೊಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ’ ಎಂದರು.

‘ಎಫ್‌ಇಇ ತಿಳಿಸಿದ ಮಾನದಂಡಗಳೆಲ್ಲ ಪೂರ್ಣಗೊಂಡಾಗ ಅದರ ಪ್ರತಿನಿಧಿಗಳುಬಂದು ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಾರೆ. ಕಡಲತೀರದ ಗುಣಮಟ್ಟವನ್ನು ಅವರು ದಿನವೂ ಅಳೆಯುತ್ತಾರೆ. ಇದರಲ್ಲಿ ನಾವು ವಂಚನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದು ನಿತ್ಯವೂಪರೀಕ್ಷೆಯಿದ್ದಂತೆ’ ಎಂದು ವಿವರಿಸಿದರು.

‘ಈ ಕಾರ್ಯಕ್ಕಾಗಿಕೇಂದ್ರ ಸರ್ಕಾರ ಸುಮಾರು ₹ 25 ಕೋಟಿ ವ್ಯಯಿಸುತ್ತಿದೆ. ಮುಂದಿನನಿರ್ವಹಣೆ, ಅಭಿವೃದ್ಧಿಯ ಖರ್ಚನ್ನೂ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ’ ಎಂದರು.

ಭಾರತವುಇದೇ ಮೊದಲ ಬಾರಿಗೆ ಪ್ರಮಾಣ ಪತ್ರ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರವನ್ನೂ ಆಯ್ಕೆ ಮಾಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಮಾತ್ರ ‘ಬ್ಲೂ ಫ್ಲ್ಯಾಗ್’ ಪ್ರಮಾಣ ಪತ್ರವನ್ನು ಪಡೆದಿವೆ. ಸ್ಪೇನ್‌ ದೇಶದ 566, ಗ್ರೀಸ್‌ನ 515 ಹಾಗೂ ಫ್ರಾನ್ಸ್‌ನ 395 ಕಡಲತೀರಗಳು ಈ ಪ್ರಮಾಣಪತ್ರಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT