ಕೆಡಿಸಿಸಿ ಬ್ಯಾಂಕ್ ಗೆ ₹7.72 ಕೋಟಿ ನಿವ್ವಳ ಲಾಭ
ಶಿರಸಿ: ದಿ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (ಕೆಡಿಸಿಸಿ) 2019-20ನೇ ಸಾಲಿಗೆ ₹7.72 ನಿವ್ವಳ ಲಾಭ ಗಳಿಸಿದೆ.
ಈ ಕುರಿತು ಶುಕ್ರವಾರ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಮಾಹಿತಿ ನೀಡಿದರು. 'ಕಳೆದ ಸಾಲಿನಲ್ಲಿ ಬ್ಯಾಂಕಿನ ಆದಾಯ ₹228.28 ಕೋಟಿ ಇದೆ ಎಂದಾಗಬೇಕು. ಶೇರು ಬಂಡವಾಳ ₹74.92 ಕೋಟಿಗೆ ಏರಿಕೆಯಾಗಿದೆ. ಠೇವಣಿ ₹2336.66 ಕೋಟಿಗೆ ಹೆಚ್ಚಳವಾಗಿದೆ' ಎಂದರು.
'₹710.27 ಕೃಷಿ ಸಾಲ, ₹922.96 ಕೋಟಿ ಕೃಷಿಯೇತರ ಸಾಲ, ₹62.81 ಕೋಟಿ ಮಾಧ್ಯಮಿಕ ಸಾಲ, ₹3783.92 ಲಕ್ಷ ಔದ್ಯೋಗಿಕ ಸಾಲ, ₹11209.73 ಲಕ್ಷ ಗೃಹಸಾಲ, ₹716.35 ಲಕ್ಷ ಫಾರ್ಮ್ ಹೌಸ್ ಸಾಲ, ₹34680.90 ಲಕ್ಷ ವಾಹನ ಸಾಲ, ₹1683.83 ಲಕ್ಷ ಉದ್ಯೋಗ ಸಾಲ ವಿತರಣೆ ಮಾಡಲಾಗಿದೆ' ಎಂದರು.
ರಾಘವ ಬಾಳೇರಿಗೆ ಅಜ್ಜಿಬಳ ಪ್ರಶಸ್ತಿ: ಜಿಲ್ಲೆಯ ಉತ್ತಮ ಸಹಕಾರಿಗೆ ದಿವಂಗತ ಜಿ.ಎಸ್.ಹೆಗಡೆ ಅಜ್ಜಿಬಳ ಸ್ಮರಣಾರ್ಥ ನೀಡಲಾಗುವ ಸಹಕಾರ ಪ್ರಶಸ್ತಿಯನ್ನು ಹೊನ್ನಾವರದ ರಾಘವ ವಿಷ್ಣು ಬಾಳೇರಿ ಅವರಿಗೆ ಉತ್ತಮ ಸಹಕಾರ ಸಂಘದ ನೌಕರರಿಗೆ ನೀಡುವ ಪ್ರಶಸ್ತಿಯನ್ನು ಯಲ್ಲಾಪುರ ಇಡಗುಂದಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರ ಸಂಘದ ನಿವೃತ್ತ ನೌಕರ ಮಹಾಬಲೇಶ್ವರ ಸುಬ್ರಾಯ ಭಟ್ಟ ಅವರಿಗೆ ನೀಡಲಾಗುವುದು ಎಂದು ಶಿವರಾಮ ಹೆಬ್ಬಾರ್ ತಿಳಿಸಿದರು.
ಸುಂದರ ರಾವ್ ಪಂಡಿತ ಪ್ರಶಸ್ತಿಯನ್ನು ಶಿರಸಿಯ ದಿ ತೋಟಗಾರ್ಸ್ ರೂರಲ್ ಕೋ-ಆಪ್. ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ.(ಟಿಆರ್ ಸಿ) ನೀಡಲಾಗುವುದು ಎಂದು ತಿಳಿಸಿದರು. ಪ್ರತಿ ತಾಲ್ಲೂಕಿನಿಂದ ತಲಾ ಒಂದರಂತೆ 11 ಸಹಕಾರ ಸಂಘಗಳಿಗೆ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ಮೋಹನದಾಸ ನಾಯಕ್, ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ್, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಲ್.ಟಿ.ಪಾಟೀಲ್, ರಾಮಕೃಷ್ಣ ಹೆಗಡೆ ಕಡವೆ, ಜಿ.ಆರ್.ಹೆಗಡೆ ಸೋಂದಾ, ಪ್ರಕಾಶ ಗುನಗಿ, ಬ್ಯಾಂಕ್ ಎಂ.ಡಿ. ಎಸ್.ಪಿ.ಚವ್ಹಾಣ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.