ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡ ಜಾತ್ಯತೀತ ರಾಜ್ಯದ ನಿರ್ಮಾತೃ’

Last Updated 27 ಜೂನ್ 2019, 15:50 IST
ಅಕ್ಷರ ಗಾತ್ರ

ಕಾರವಾರ:‘ನಾಡಪ್ರಭು ಕೆಂಪೇಗೌಡ ಕೇವಲ ಬೆಂಗಳೂರು ನಿರ್ಮಾತೃವಾಗದೆ, ಸಾಂಸ್ಕೃತಿಕರಾಯಭಾರಿಯಾಗಿದ್ದರು. ತಮ್ಮ ಆಡಳಿತದಲ್ಲಿ ಎಲ್ಲ ಧರ್ಮ, ಜಾತಿಗಳ ಜನ ಸಮುದಾಯವನ್ನು ಒಟ್ಟೊಟ್ಟಿಗೇ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದರು’ ಎಂದು ಜಿಲ್ಲಾ ಪಂಚಾಯ್ತಿಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮದ್ ರೋಶನ್ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾದನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಂಪೇಗೌಡರು ಎಲ್ಲ ಜಾತಿ, ಧರ್ಮದವರು ಶಾಂತಿಯುತವಾಗಿ ಜೊತೆಯಲ್ಲಿ ವಾಸ ಮಾಡಬೇಕೆಂಬ ಕನಸು ಕಂಡವರು. ಆ ನಿಟ್ಟಿನಲ್ಲಿ ಇಂದು ಬೆಂಗಳೂರು ಬೆಳೆದಿದೆ. ಅದನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಕೆಲಸವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ,‘ಬೆಂಗಳೂರನ್ನು ವಿಶ್ವ ಭೂಪಟದಲ್ಲಿ ಗುರುತಿಸಲಾಗುತ್ತಿದೆ. ಈಗ ಅಂದಾಜುಎರಡುಕೋಟಿ ಜನ ಬೆಂಗಳೂರನ್ನು ಅವಲಂಬಿಸಿದ್ದಾರೆ. ಇದಕ್ಕೆ ಕಾರಣ ಕೆಂಪೇಗೌಡರು.ಅವರು ಯೋಜಿತ ನಗರವನ್ನಾಗಿ ಮಾಡಿದರು’ ಎಂದು ಹೇಳಿದರು.

ನಗರಸಭೆ ಆಯುಕ್ತ ಎಸ್.ಯೋಗೇಶ್ವರ ಮಾತನಾಡಿ, ‘ಉದ್ಯಾನಗಳು, ಕೆರೆಗಳು, ಕೃಷಿ ಭೂಮಿ, ತೋಟಗಾರಿಕೆ ಕಸುಬುಗಳನ್ನು ಆಧಾರಿತ ಮಾರುಕಟ್ಟೆಗಳು, ಉದ್ದಿಮೆಗಳು ಬೆಳೆಯಬೇಕೆಂಬ ದೂರದೃಷ್ಟಿಯಿಂದ ಅವರು ಕೆಲಸ ಮಾಡಿದರು. ಬೆಂಗಳೂರು ಪ್ರಸ್ತುತವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ’ ಎಂದರು.‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ. ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಯು.ಎಚ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT