ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳಸೇತುವೆ ಕಾಮಗಾರಿ: ರೈಲುಗಳ ಸಂಚಾರದಲ್ಲಿ ಇಂದು ವ್ಯತ್ಯಯ

Last Updated 23 ನವೆಂಬರ್ 2019, 11:33 IST
ಅಕ್ಷರ ಗಾತ್ರ

ಕಾರವಾರ: ಕೊಂಕಣ ರೈಲ್ವೆಯು ಗೋಕರ್ಣ ರೋಡ್ ಮತ್ತು ಕುಮಟಾ ರೈಲು ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್‌ನಲ್ಲಿ ನ.24ರಂದು ಕಾಂಕ್ರೀಟ್ ಕೆಳಸೇತುವೆ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿದೆ. ಹೀಗಾಗಿ ಮಧ್ಯಾಹ್ನ 12.20ರಿಂದ ಸಂಜೆ 4.20ವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಕಾಮಗಾರಿಯ ನಿಮಿತ್ತ ಕಾರವಾರ– ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16514) ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿಮಧ್ಯಾಹ್ನ 3.40ಕ್ಕೆ ಕಾರವಾರದಿಂದ ಪ್ರಯಾಣಿಸಲಿದೆ.

ಮಡಗಾಂ ಮತ್ತು ಮಂಗಳೂರು ನಡುವಿನ ಪ್ಯಾಸೆಂಜರ್ ರೈಲಿನ(ಸಂಖ್ಯೆ 56641) ಪ್ರಯಾಣವನ್ನು ನಿಗದಿತ ಸಮಯಕ್ಕಿಂತ 15–20 ನಿಮಿಷ ವಿಳಂಬ ಮಾಡಲಾಗುವುದು ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕಬಾಬನ್ ಘಾಟ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT