ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎನ್‌ ವಸಂತೋತ್ಸವ 21, 22ರಂದು

ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜನೆ
Last Updated 18 ಜುಲೈ 2018, 17:40 IST
ಅಕ್ಷರ ಗಾತ್ರ

ಶಿರಸಿ: ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸ್ಮರಣಾರ್ಥ ಇದೇ 21ರಿಂದ ಎರಡು ದಿನಗಳ ಕಾಲ ‘ಕೆಎಸ್ಎನ್ ವಸಂತೋತ್ಸವ’ ಕಾರ್ಯಕ್ರಮವನ್ನು ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿಆಯೋಜಿಸಲಾಗಿದೆ ಎಂದುಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘21ರಂದು ಸಂಜೆ 5ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಕಾರ್ಯಕ್ರಮ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. ಶಿರಸಿ ಉಪ ವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತ ರಾಜು, ಕವಯಿತ್ರಿ ಮಮತಾ ಅರಸೀಕೆರೆ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನಶಿರಸಿ ಘಟಕ ಹಾಗೂ ಕದಂಬ ಕಲಾ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.

‘ಪ್ರಸಿದ್ಧಕಲಾವಿದರಿಂದ ಸುಗಮ ಸಂಗೀತ ಸೌರಭ, ಮಾರಿಕಾಂಬಾ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಪರಿಷತ್ತಿನಶಿರಸಿ ಘಟಕದ ಕಲಾವಿದರಿಂದ ಸಮೂಹ ಗಾಯನ, ಶಿರಸಿಯ ದೃಷ್ಟಿ ತಂಡ ಹಾಗೂ ಶಾಲ್ಮಲಾ ನಾಟ್ಯ ತಂಡದವರಿಂದ ನೃತ್ಯ ವೈಭವ ನಡೆಯಲಿದೆ. ಕೆಎಸ್ಎನ್ ಅವರ ಗೀತೆಗಳಿಗೆ ತುಳಸಿ ಹೆಗಡೆ ಹೆಜ್ಜೆ ನೃತ್ಯ ಮಾಡಲಿದ್ದಾಳೆ’ ಎಂದು ತಿಳಿಸಿದರು.

22ರಂದು ಬೆಳಿಗ್ಗೆ 10ಕ್ಕೆ ‘ಕೆಎಸ್ಎನ್ ಮತ್ತು ಕನ್ನಡ ಕಾವ್ಯ ಪರಂಪರೆ’ ವಿಷಯವಾಗಿ ಕವಿಗೋಷ್ಠಿನಡೆಯಲಿದೆ. ಹಿರಿಯ ಕವಿ ವಿಷ್ಣು ನಾಯಕ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ11.30ರಿಂದ ‘ಸಾಹಿತ್ಯ ಮತ್ತು ಸಂಗೀತದ ಅನನ್ಯತೆ’ ಕುರಿತು ಕಥೆಗಾರ ಶ್ರೀಧರ ಬಳಗಾರ ವಿಶೇಷ ಉಪನ್ಯಾಸ ನೀಡುವರು. ಮಧ್ಯಾಹ್ನ 12.30ರಿಂದ ‘ಕೆಎಸ್ಎನ್ ಮತ್ತು ಕನ್ನಡ ಕಾವ್ಯ ಪರಂಪರೆ’ ವಿಷಯವಾಗಿ ವಿಶೇಷ ಕವಿಗೋಷ್ಠಿನಡೆಯಲಿದೆ ಎಂದರು.

ಸಮಾರೋಪ: 22ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಲಿದ್ದಾರೆ.ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. ಕಲಾವಿದರಾದ ನಗರ ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ಸುಮನಾ ಹೆಗಡೆ ಅವರಿಂದ ಸುಗಮ ಸಂಗೀತ ಸೌರಭ ನಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ನಗರ ಶ್ರೀನಿವಾಸ ಉಡುಪ, ಶಿರಸಿ ರತ್ನಾಕರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT