ಗುರುವಾರ , ನವೆಂಬರ್ 21, 2019
20 °C

ಸುಸಜ್ಜಿತ ಆಸ್ಪತ್ರೆ: ಅ.5ರಂದು ಜಾಗ ಅಂತಿಮ- ಶಾಸಕ ದಿನಕರ ಶೆಟ್ಟಿ

Published:
Updated:
Prajavani

ಕಾರವಾರ: ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸುವ ಸಂಬಂಧ ಉದ್ಯಮಿ ಬಿ.ಆರ್.ಶೆಟ್ಟಿ ಅವರ ಕಾರ್ಯದರ್ಶಿ ಕುಶಾಲ್ ಶೆಟ್ಟಿ ಅ.5ರಂದು ಕುಮಟಾಕ್ಕೆ ಬರಲಿದ್ದಾರೆ. ಈಗಾಗಲೇ ಗುರುತಿಸಿರುವ ಜಾಗಗಳಲ್ಲಿ ಒಂದನ್ನು ಅಂದು ಅಂತಿಮಗೊಳಿಸಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.

ಆಸ್ಪತ್ರೆ ಸ್ಥಾಪಿಸಲು ಆಸಕ್ತರಾಗಿರುವ ಬಿ.ಆರ್.ಶೆಟ್ಟಿ ಅವರೊಂದಿಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಸಭೆಯ ಬಗ್ಗೆ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಿಲ್ಲೆಯ ಕರಾವಳಿ ಭಾಗದ ಜನರ ಬಹು ಬೇಡಿಕೆಯಾಗಿರುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಯ ಬಗ್ಗೆ ಚರ್ಚಿಸಲೆಂದೇ ಅವರು ದುಬೈನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು. ಸುಮಾರು 20 ನಿಮಿಷಗಳ ಮಾತುಕತೆಯಲ್ಲಿ ಕುಮಟಾ ಸುತ್ತಮುತ್ತ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಯೋಜನೆ ಹಮ್ಮಿಕೊಳ್ಳಲು ಆಸಕ್ತಿ ಹೊಂದಿರುವುದನ್ನು ಅವರು ವಿವರಿಸಿದರು’ ಎಂದು ಹೇಳಿದರು. 

‘ಸುಮಾರು 20 ನಿಮಿಷಗಳ ಸಭೆಯಲ್ಲಿ ಆಸ್ಪತ್ರೆ ಸ್ಥಾಪನೆಯ ಅವಶ್ಯಕತೆಯನ್ನು ಅವರು ಮನಗಂಡರು. ಅಲ್ಲದೇ ಜನರ ಸೇವೆ ಮಾಡುವುದು ಬಹುಮುಖ್ಯ ಎಂದು ಅವರ ತಾಯಿ ಕೂಡ ಹೇಳುತ್ತಿದ್ದ ಕಾರಣ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ’ ಎಂದು ದಿನಕರ ಶೆಟ್ಟಿ ತಿಳಿಸಿದರು.

ಪ್ರತಿಕ್ರಿಯಿಸಿ (+)