ಕೊನೆಯ ದಿನ ನಾಮಪತ್ರ ಸಲ್ಲಿಕೆಯ ತರಾತುರಿ

7
ನಗರಸಭೆ ಕಚೇರಿ ಆವರಣದಲ್ಲಿ ಸೇರಿದ ನೂರಾರು ಅಭ್ಯರ್ಥಿಗಳು, ಅಭಿಮಾನಿಗಳು

ಕೊನೆಯ ದಿನ ನಾಮಪತ್ರ ಸಲ್ಲಿಕೆಯ ತರಾತುರಿ

Published:
Updated:
Deccan Herald

ಕಾರವಾರ:  ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿದೆ. ಹೀಗಾಗಿ ಇಲ್ಲಿನ ನಗರಸಭೆ ಕಚೇರಿಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ.

ನಗರಸಭೆ ಕಚೇರಿಯ ಸಭಾಂಗಣದಲ್ಲಿ ಮೂರು ಕೌಂಟರ್‌ಗಳನ್ನು ಮಾಡಲಾಗಿದ್ದು, ಅಭ್ಯರ್ಥಿಗಳು ಬಿ ಫಾರಂ ಜತೆ ವಿವಿಧ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ. ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, ಬಹುತೇಕರು ಕೊನೆಯ ದಿನವಾದ ಇಂದೇ ನಾಮಪತ್ರ ಸಲ್ಲಿಕೆ ಬಂದಿದ್ದಾರೆ. ಇದರಿಂದ ಕಚೇರಿಯ ಆವರಣದಲ್ಲಿ ವಿಪರೀತ ದಟ್ಟಣೆ ಉಂಟಾಗಿದೆ. ಪೊಲೀಸರು ಅಭ್ಯರ್ಥಿಗಳು ಮತ್ತು ಅವರು ಬೆಂಬಲಿಗರನ್ನು ತಂಡಗಳನ್ನಾಗಿ ವಿಂಗಡಿಸಿ ಕಳುಹಿಸುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಶುಭದಾಯಕ ಎಂದು ಹಲವಾರು ಅಭ್ಯರ್ಥಿಗಳು ಕಾದು ಕುಳಿತಿದ್ದರು. ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದ ಕಾರಣ ಅಂದು ರಜೆ ಘೋಷಿಸಿದ್ದರಿಂದ ನಾಮಪತ್ರ ಸ್ವೀಕಾರ ಇರಲಿಲ್ಲ. ಹೀಗಾಗಿ ಬಹುತೇಕ ಅಭ್ಯರ್ಥಿಗಳು ಶನಿವಾರವೇ ಉಮೇದುವಾರಿಕೆ ಸಲ್ಲಿಸುವಂತಾಯಿತು.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಅವರೊಂದಿಗೆ ಹಲವಾರು ಮಂದಿ ಪಕ್ಷೇತರರಾಗಿಯೂ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಆ.20ರಂದ ನಾಮಪತ್ರ ಪರಿಶೀಲನೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !