ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ರಾಸಾಯನಿಕಯುಕ್ತ ತ್ಯಾಜ್ಯ ಚರಂಡಿಗೆ ಸೋರಿಕೆ

Last Updated 22 ಅಕ್ಟೋಬರ್ 2020, 3:38 IST
ಅಕ್ಷರ ಗಾತ್ರ

ಕಾರವಾರ: ನಗರದ ಬಿಣಗಾದಲ್ಲಿರುವ ಸೋಲಾರೀಸ್ ಕ್ಯಾಮ್‍ಟೆಕ್ ಕಾರ್ಖಾನೆಯಿಂದ ರಾಸಾಯನಿಕಯುಕ್ತ ತ್ಯಾಜ್ಯವು ರಸ್ತೆ ಬದಿಯ ಚರಂಡಿಗೆ ಸೋರಿಕೆಯಾಗುತ್ತಿರುವುದು ಬುಧವಾರ ಗೊತ್ತಾಗಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ತ್ಯಾಜ್ಯ ಸೇರಿಕೊಂಡಿದ್ದರಿಂದ ಪಾಚಿಗಳೂ ಸುಟ್ಟಿದ್ದು,‌ಇಲ್ಲಿನ ಸೀತಾ ನಗರ ಸಮೀಪದ ಚರಂಡಿಯಲ್ಲಿ ನೀರಿನ ಬಣ್ಣ ಬದಲಾಗಿತ್ತು. ಈ ರೀತಿಯ ತ್ಯಾಜ್ಯ ಸೇರಿಕೊಂಡ ಕಾರಣ ಸಮೀಪದ ಮನೆಗಳಲ್ಲಿ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ರೀತಿ ಪದೇಪದೇ ನಡೆಯುತ್ತಿರುವ ಬಗ್ಗೆ ಗಮನಕ್ಕೆ ತಂದರೂ ಕಾರ್ಖಾನೆಯ ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯದ ಬಗ್ಗೆ ಚಿಂತೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆಯು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT