ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಗೋವಾ ಮದ್ಯ ವಶ

Last Updated 6 ಏಪ್ರಿಲ್ 2020, 14:11 IST
ಅಕ್ಷರ ಗಾತ್ರ

ಕಾರವಾರ: ಸೈಕಲ್‌ನಲ್ಲಿ ಅಕ್ರಮವಾಗಿ ಇಡಲಾಗಿದ್ದ ಗೋವಾ ಫೆನ್ನಿ ಮತ್ತು ಮದ್ಯವನ್ನು ಅಬಕಾರಿ ಪೊಲೀಸರು ನಗರದ ಬಿಲ್ಟ್ ವೃತ್ತದ ಬಳಿಸೋಮವಾರ ಜಪ್ತಿ ಮಾಡಿದ್ದಾರೆ.

ಆರೋಪಿ ನಾಪತ್ತೆಯಾಗಿದ್ದು, ಸೈಕಲ್, 22 ಲೀಟರ್ ಗೋವಾ ಫೆನ್ನಿ, ಮತ್ತು ನಾಲ್ಕು ಲೀಟರ್ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅವುಗಳ ಮೊತ್ತ ಅಂದಾಜು₹8,200 ಎಂದು ‍ಪೊಲೀಸರು ತಿಳಿಸಿದ್ದಾರೆ.

ಅದೇರೀತಿ, ನಗರದ ಮನೆಯೊಂದರ ಮೇಲೆಭಾನುವಾರ ದಾಳಿ ಮಾಡಿ ಒಂಬತ್ತು ಲೀಟರ್ ಗೋವಾ ಫೆನ್ನಿ,ಒಂದೂವರೆ ಲೀಟರ್ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ಈಸಂದರ್ಭದಲ್ಲಿ ಆರೋಪಿ ಪ್ರಶಾಂತ್ ಪತ್ರೇಕರ ತಪ್ಪಿಸಿಕೊಂಡಿದ್ದಾನೆ.

ಬೆಳಂಬಾರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ದಾಳಿ ಮಾಡಿದ ಪೊಲೀಸರು ಸುಮಾರು ₹ 57 ಸಾವಿರ ಮೊತ್ತದ ಮದ್ಯ ವಶಪಡಿಸಿಕೊಂಡಿದ್ದಾರೆ.ರಾಜೇಶ ಗಣಪತಿ ಖಾರ್ವಿ ಮತ್ತು ಭಾರತಿ ರಾಜೇಶ್ ಖಾರ್ವಿ ಅವರ ಅವರ ಮನೆಯ ಹಿಂಬದಿಯ ಟ್ಯಾಂಕ್‌ನಲ್ಲಿ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು.ಆರೋಪಿತರು ಪರಾರಿಯಾಗಿದ್ದಾರೆ. ಗೋವಾ ಫೆನ್ನಿಯತಲಾ 750 ಎಂ.ಎಲ್‌.ನ 144 ಬಾಟಲಿಗಳು ಹಾಗೂ 108 ಲೀಟರ್ ಗೋವಾ ಮದ್ಯ ದೊರೆತಿದೆ ಎಂದು ಅಬಕಾರಿ ಪೊಲೀಸರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT