ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಟಿಬೆಟನ್ ಕ್ಯಾಂಪ್ ಲಾಕ್‌ಡೌನ್ ವಿಸ್ತರಣೆ

Last Updated 20 ಜುಲೈ 2020, 15:33 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಟಿಬೆಟನ್ ಕ್ಯಾಂಪ್‍ನಲ್ಲಿ ಲಾಕ್‌ಡೌನ್ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು 15 ದಿನಗಳವರೆಗೆ ಲಾಕ್‍ಡೌನ್ ಘೋಷಿಸಿ ಮೊನ್ಯಾಸ್ಟರಿಗಳ ಬೌದ್ಧ ಮುಖಂಡರು ಹಾಗೂ ಸಿವಿಲ್ ಕ್ಯಾಂಪ್‍ಗಳ ಪ್ರಮುಖರು ಜಾರಿ ಮಾಡಿದ್ದರು.

'ಟಿಬೆಟನ್ ಕ್ಯಾಂಪ್‍ನಲ್ಲಿ ಇಲ್ಲಿಯವರೆಗೆ ಖಚಿತಗೊಂಡಿದ್ದ 13 ಕೋವಿಡ್ ಸೋಂಕಿತರು ಈಗಾಗಲೇ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಎರಡು ದಿನಗಳ ಹಿಂದೆ ಬಿಹಾರದಿಂದ ಬಂದಿದ್ದ ಒಬ್ಬರಿಗೆ ಸೋಂಕು ಖಚಿತಗೊಂಡಿದ್ದು ಬಿಟ್ಟರೆ, ಟಿಬೆಟನ್ ಕ್ಯಾಂಪ್ ಸದ್ಯ ಹಸಿರು ವಲಯ ಆಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‍ಡೌನ್ ಮುಂದುವರೆಸಲಾಗಿದೆ' ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.

ಹಳ್ಳಿಗೂ ಕಾಲಿಟ್ಟಿದೆ: ಗ್ರಾಮೀಣ ಭಾಗಗಳಲ್ಲೂ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಹೋಂ ಕ್ವಾರಂಟೈನ್ ನಿಯಮವನ್ನು ಕೆಲವರು ಉಲ್ಲಂಘಿಸುತ್ತಿದ್ದಾರೆ ಎಂದು ಕೆಲ ಹಳ್ಳಿಗರು ಆರೋಪಿಸುತ್ತಿದ್ದಾರೆ. ತಿಳಿಹೇಳಲು ಹೋದವರ ಜೊತೆಯೇ ವಾಗ್ವಾದ ನಡೆದ ಘಟನೆಗಳು ಚಿಗಳ್ಳಿ ಸೇರಿದಂತೆ ಕೆಲವೆಡೆ ವರದಿಯಾಗಿವೆ.

ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಬಂದಿರುವರು, ಗಂಟಲು ದ್ರವದ ವರದಿ ಬರುವ ಮುನ್ನವೇ ಊರೆಲ್ಲ ತಿರುಗಾಡುತ್ತಿದ್ದಾರೆ ಎಂದು ಕೆಲವು ಆರೋಪಿಸಿರುವ ಕಾರಣ, ಅಂತವರ ಮೇಲೆ ಪ್ರಕರಣ ದಾಖಲಿಸಲು ತಾಲ್ಲೂಕು ಆಡಳಿತ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT