ಬುಧವಾರ, ಮಾರ್ಚ್ 3, 2021
28 °C
ಪತ್ರಕರ್ತ ಆರ್.ವಿ.ಭಾಗವತ ಅಭಿಮತ

ತಾದಾತ್ಮ್ಯತೆಯ ಬರಹ ಓದುಗರಿಗೆ ಆಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕವು ಈ ವರ್ಷದಿಂದ ಆರಂಭಿಸಿರುವ ಮಾಧ್ಯಮ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಆರ್.ವಿ.ಭಾಗವತ ಅವರಿಗೆ ನೀಡಿ, ಗೌರವಿಸಲಾಯಿತು.

ಶುಕ್ರವಾರ ಇಲ್ಲಿ ನಡೆದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಭಾಗವತ ಅವರು, ‘ವಿಷಯದೊಂದಿಗೆ ತಾದಾತ್ಮ್ಯತೆ ಬೆಳೆಸಿಕೊಂಡು ಬರೆದ ಬರಹಗಳನ್ನು ಓದುಗರು ಆಸ್ವಾದಿಸುತ್ತಾರೆ. ವೃತ್ತಿ ಘನತೆಯನ್ನು ಉಳಿಸಿಕೊಂಡು ಪತ್ರಕರ್ತರು ಬೆಳೆಯಬೇಕು. ಪ್ರವೃತ್ತಿಯು ವೃತ್ತಿಗೆ ಪೂರಕವಾಗಿರಬೇಕು’ ಎಂದರು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ್ ಮಾತನಾಡಿ, ‘ವರ್ತಮಾನದ ವಾಸ್ತವಾಂಶದ ಜೊತೆಗೆ, ಭವಿಷ್ಯದ ಆತಂಕಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ಕಾರ್ಯ ಪತ್ರಕರ್ತರಿಂದ ಆಗಬೇಕು. ಸಮಾಜಕ್ಕೆ ಇಂದು ಮಾಧ್ಯಮಗಳ ಹಂಗು ಬೇಕಾಗಿಲ್ಲ. ಸಮಸ್ಯೆ ಬಗೆಹರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳು ಲಭ್ಯವಿವೆ. ಇಂತಹ ಕಾಲಘಟ್ಟದಲ್ಲಿ ಮಾಧ್ಯಮದ ಮೇಲಿನ ವಿಶ್ವಾಸ ಉಳಿಸಿಕೊಳ್ಳಲು, ವಾಸ್ತವದ ವರದಿ ಒತ್ತು ಕೊಡಬೇಕು’ ಎಂದರು.

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರು ಸಂಘಕ್ಕೆ ಕಪಾಟು, ಜನಶಕ್ತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ಬಿ.ಹಿರೇಮಠ ಅವರು ಟಿ.ವಿ.ಯನ್ನು ಕೊಡುಗೆಯಾಗಿ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ರಾಜ್ಯ ಸಮಿತಿ ಸದಸ್ಯ ಸುಬ್ರಾಯ ಭಟ್ಟ, ನಿಕಟಪೂರ್ವ ಅಧ್ಯಕ್ಷ ವಿರೂಪಾಕ್ಷ ಹೆಗಡೆ ಇದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು. ಸಂಘದ ಕಾರ್ಯದರ್ಶಿ ಸಂದೇಶ ಭಟ್ಟ, ಖಜಾಂಚಿ ಯಶವಂತ ನಾಯ್ಕ ಸಹಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.