ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮದೀನಾ ಕಾಲೊನಿ ಹಾಟ್‌ಸ್ಪಾಟ್

Last Updated 8 ಮೇ 2020, 16:49 IST
ಅಕ್ಷರ ಗಾತ್ರ

ಕಾರವಾರ: ಭಟ್ಕಳದಲ್ಲಿ ಒಂದೇ ದಿನ ಕೋವಿಡ್ 19ನ 12 ಪ್ರಕರಣಗಳು ದೃಢಪಟ್ಟಿರುವ ಕಾರಣ ಇಲ್ಲಿನ ಮದೀನಾ ಕಾಲೊನಿಯನ್ನು ‘ಹಾಟ್‌ಸ್ಪಾಟ್’ ಎಂದು ಗುರುತಿಸಲಾಗಿದೆ. ಮುಂದಿನ ಆದೇಶದವರೆಗೆಇಲ್ಲಿ ಯಾರೂ ಅಧಿಕೃತ ಪರವಾನಗಿ ಇಲ್ಲದೇ ಸಂಚರಿಸುವಂತಿಲ್ಲ ಎಂದು ಭಟ್ಕಳ ಉಪ ವಿಭಾಗಾಧಿಕಾರಿಶುಕ್ರವಾರ ಆದೇಶಿಸಿದ್ದಾರೆ.

‘ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ, ಅಂದರೆ ವೈದ್ಯಕೀಯ ಕಾರಣಕ್ಕಾಗಿ ಅನುಮತಿ ಪಡೆದು ಹೋಗಬಹುದು. ಮದೀನಾ ಕಾಲೊನಿಯಲ್ಲಿ ಈ ಹಿಂದೆ ನೀಡಿದ ಎಲ್ಲ ಪಾಸ್‌ಗಳನ್ನು ರದ್ದು ಮಾಡಲಾಗಿದೆ.ವಿವಿಧ ಸೇವೆಗಳಿಗೆ ಈ ಹಿಂದೆ ಪಾಸ್ ಪಡೆದವರು ಅದನ್ನು ಬಳಸಿ ಸಂಚರಿಸುವಂತಿಲ್ಲ. ಈ ಪ್ರದೇಶಕ್ಕೆ ಸಾರ್ವಜನಿಕರಿಗೆ ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ಜಾಲಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ (ಮೊಬೈಲ್: 98861 24112) ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಅವರೊಂದಿಗೆ ಸಹಾಯಕ ಸಿಬ್ಬಂದಿಯನ್ನಾಗಿ ಜಗದೀಶ ಎಸ್.ನಾಯ್ಕ (ಮೊಬೈಲ್: 81055 67853), ಅನ್ವರ್ ಬಾಳೂರು (99869 46703), ವಿನಾಯಕ ನಾಯ್ಕ (87623 95731), ವಸಂತ ನಾಯ್ಕ (99457 52298), ಕಿರಣ ನಾಯ್ಕ (80738 99948), ಉದಯಕುಮಾರ.ಜಿ (94488 88754) ಅವರನ್ನು ನೇಮಿಸಲಾಗಿದೆ. ಮದೀನಾ ಕಾಲೊನಿಯ ಜನರು ತುರ್ತು ಅವಶ್ಯಕ ಸೇವೆಗಳಿಗೆ ಸಹಾಯವಾಣಿ 08385 226422 ಸಂಪರ್ಕಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT