ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ| ಮೀನುಗಾರರ ಪ್ರಾಣ ಜಿಲ್ಲಾಡಳಿತದ ಕೈಯಲ್ಲಿ

ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ತಾಂಡೇಲರ ಸಂಘದಿಂದ ಧರಣಿಗೆ ಬೆಂಬಲ
Last Updated 23 ಜನವರಿ 2020, 15:53 IST
ಅಕ್ಷರ ಗಾತ್ರ

ಕಾರವಾರ: ‘ಮಂಗಳೂರು, ಮಲ್ಪೆ ಸೇರಿದಂತೆ ಎಲ್ಲಾ ಬಂದರುಗಳದೋಣಿಗಳಿಗೆಸಂಕಷ್ಟದ ಸಮಯದಲ್ಲಿ ಕಾರವಾರದ ಬಂದರು ಆಶ್ರಯ ನೀಡುತ್ತದೆ. ಲಂಗರು ಹಾಕಲು ಅತ್ಯಂತ ಸುರಕ್ಷತೆಯಿರುವ ರಾಜ್ಯದ ಏಕೈಕ ಮೀನುಗಾರಿಕಾ ಬಂದರನ್ನು ಕಿತ್ತುಕೊಳ್ಳಲು ಸರ್ಕಾರಕ್ಕೆ ಅವಕಾಶ ನೀಡಬಾರದು’ ಎಂದು ಮಲ್ಪೆ ಮೀನುಗಾರರ ತಾಂಡೇಲರ ಸಂಘದ ಉಪಾಧ್ಯಕ್ಷ ನಾಗರಾಜ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು,‘ರಾಜ್ಯ ಮತ್ತು ನೆರೆ ರಾಜ್ಯಗಳ ಮೀನುಗಾರರಿಗೆ ಚಂಡಮಾರುತದ ಸಂದರ್ಭದಲ್ಲಿ ಜೀವ ರಕ್ಷಣೆಗೆ ಸಹಾಯವಾಗುವ ಬಂದರು ಇದಾಗಿದೆ. ವಾಣಿಜ್ಯ ಬಂದರು ವಿಸ್ತರಣೆ ಮಾಡಿದರೆ ಮೀನುಗಾರರಭವಿಷ್ಯಕ್ಕೆ ಆತಂಕ ಎದುರಾಗಲಿದೆ’ ಎಂದು ಹೇಳಿದರು.

‘ಕಾಮಗಾರಿ ಪೂರ್ಣಗೊಂಡರೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮೀನುಗಾರರಿಗೆ ಸುರಕ್ಷಿತ ತಾಣವಿಲ್ಲದೇ ಸಾವು ನೋವು ಸಂಭವಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಸಾವಿರಾರು ಮೀನುಗಾರರಪ್ರಾಣಜಿಲ್ಲಾಡಳಿತದ ಕೈಯಲ್ಲಿದೆ. ಇಲ್ಲಿಯ ಜನ ಸರ್ಕಾರದ ವಿವಿಧ ಯೋಜನೆಗಳಿಗೆ ಈಗಾಗಲೇ ಶೇ 75ರಷ್ಟು ಜಾಗವನ್ನು ನೀಡಿದ್ದಾರೆ. ಉಳಿದ ಶೇ 25 ಜಾಗವನ್ನೂ ನೀಡಿದರೆ ಅದು ಜನರಅಳಿವು ಉಳಿವಿನ ಪ್ರಶ್ನೆಯಾಗಲಿದೆ’ ಎಂದರು.

ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ತಾಂಡೇಲರ ಸಂಘದ ಅಧ್ಯಕ್ಷ ಗಣೇಶ ಸುವರ್ಣ ಮಾತನಾಡಿ, ಸಾಗರಮಾಲಾ ಯೋಜನೆಯಡಿಯಲ್ಲಿಪ್ರಾರಂಭವಾಗುತ್ತಿರುವ ಕಾಮಗಾರಿಯನ್ನು ಕೂಡಲೇ ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಅಹೋರಾತ್ರಿಧರಣಿ11ನೇ ದಿನಕ್ಕೆ:ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರುದ್ಧ ಮೀನುಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ 11ನೇ ದಿನವನ್ನು ಪೂರೈಸಿದೆ. ಗುರುವಾರವೂ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದರು.

ಭಟ್ಕಳದ ಮೀನುಗಾರ ಮುಖಂಡರು ಹಾಗೂ ಮೀನುಗಾರರು ಧರಣಿಯಲ್ಲಿ ಪಾಲ್ಗೊಂಡರು. ಮುಖಂಡ ರಾಮ ಮೊಗೇರ ಮಾತನಾಡಿ, ‘ಜನ ವಿರೋಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಯತ್ನಿಸುತ್ತಿದೆ. ಇದು ಖೇದಕರ ಸಂಗತಿಯಾಗಿದೆ. ಮೀನುಗಾರರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಸಂದರ್ಭ ಎದುರಾಗಿದೆ’ ಎಂದು ಹೋರಾಟಕ್ಕೆ ಬಲ ತುಂಬಿದರು.

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹಾಗೂ ಸದಸ್ಯರು, ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ತಂಡೇಲರ ಸಂಘ, ಕರ್ನಾಟಕ ರಾಜ್ಯ ರೈತ ಸಂಘಟನೆಯವರು, 100ಕ್ಕೂ ಹೆಚ್ಚು ಮೀನುಗಾರ ಮಹಿಳೆಯರು ಇದ್ದರು.

ಮಲ್ಪೆ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ ಕುಂದರ್, ನಾಗೇಶ ಕುಂದರ್, ವಿಶ್ವನಾಥ, ಕಾರವಾರದ ಸುಧಾಕರ ಹರಿಕಂತ್ರ, ರಾಜು ತಾಂಡೇಲ, ಸದಾನಂದ ಹರಿಕಂತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT