ಶಿರಸಿಯಲ್ಲಿ ಗಾಂಧಿ ಜಯಂತಿ: ಸ್ವಚ್ಛತೆಯ ಅರಿವು ಜಾಗೃತಗೊಳಿಸಿದ ಮ್ಯಾರಥಾನ್

7
ಓಟದಲ್ಲಿ ಸಾರ್ವಜನಿಕರು ಭಾಗಿ

ಶಿರಸಿಯಲ್ಲಿ ಗಾಂಧಿ ಜಯಂತಿ: ಸ್ವಚ್ಛತೆಯ ಅರಿವು ಜಾಗೃತಗೊಳಿಸಿದ ಮ್ಯಾರಥಾನ್

Published:
Updated:
Deccan Herald

ಶಿರಸಿ: ‘ನಮ್ಮ ಕಸ– ನಮ್ಮ ಹೊಣೆ’, ‘ನಮ್ಮ ನಡೆ ಸ್ವಚ್ಛತೆಯ ಕಡೆಗೆ’ ಇಂತಹ ರಚನಾತ್ಮಕ ಚಿಂತನೆಯೊಂದಿಗೆ ನಗರದ ನಾಗರಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಅಧಿಕಾರಿಗಳು, ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮ್ಯಾರಥಾನ್ ನಡೆಸಿದರು.

ಗಾಂಧಿ ಜಯಂತಿ ಅಂಗವಾಗಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಓಟಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಪೌರಾಯುಕ್ತೆ ಅಶ್ವಿನಿ ಬಿ.ಎಂ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಬಿಇಒ ಸದಾನಂದ ಸ್ವಾಮಿ ಜಂಟಿಯಾಗಿ ಚಾಲನೆ ನೀಡಿದರು.

ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೀವಜಲ ಕಾರ್ಯಪಡೆ, ರೆಡ್ ಆ್ಯಂಟ್, ಅರಣ್ಯ ಕಾಲೇಜು, ತೋಟಗಾರಿಕಾ ಕಾಲೇಜು, ಸ್ಕೌಟ್ಸ್ ಮತ್ತು ಗೈಡ್ಸ್, ರನ್ನರ್ಸ್ 360 ಕ್ಲಬ್ ಸದಸ್ಯರು, ಅರಣ್ಯ ಇಲಾಖೆ, ಕಂದಾಯ ಇಲಾಖೆ ನೌಕರರು, ನಾಗರಿಕರು ಓಟದಲ್ಲಿ ಭಾಗವಹಿಸಿದರು. ಕೆಲವರು ಓಡಿದರೆ, ಇನ್ನಷ್ಟು ಜನರು ವೇಗದ ನಡಿಗೆಯಲ್ಲಿ ಸಾಗಿದರು. ವಿದ್ಯಾರ್ಥಿಗಳು ಸ್ವಚ್ಛತೆ ಅರಿವು ಮೂಡಿಸುವ ಬ್ಯಾನರ್ ಹಿಡಿದು ಹೆಜ್ಜೆ ಹಾಕಿದರು. ಬಿಡಕಿಬೈಲಿನ ಗಾಂಧಿ ಪ್ರತಿಮೆ ಎದುರು ಎಲ್ಲರೂ ಸಮಾಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜು ಮೊಗವೀರ ಅವರು, ‘ದೊಡ್ಡ ಸಾಧನೆ ಮಾಡುವ ಜೊತೆಗೆ ಸಣ್ದ ಸಂಗತಿಗಳಿಗೆ ಗಮನ ನೀಡಿದರೆ, ಬದುಕು ಇನ್ನಷ್ಟು ಸುಂದರವಾಗುತ್ತದೆ. ಎಲ್ಲ ಸಂಘಟನೆಗಳು ನಡೆಸುತ್ತಿರುವ ಸ್ವಚ್ಛತಾ ಕಾರ್ಯ ಕೆಲಸ ಮುಂದುವರಿಯುತ್ತದೆ. ಇದಕ್ಕೆ ನಾಗರಿಕರು ಕೈ ಜೋಡಿಸಿ, ಮಾದರಿ ನಗರವನ್ನಾಗಿ ಮಾರ್ಪಡಿಸಬೇಕು’ ಎಂದರು. ಎಂ.ಎಂ.ಭಟ್ಟ ಕಾರೇಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

ನಂತರ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿ ಯಲ್ಲಾಪುರ ನಾಕಾದಿಂದ ಚಿಪಗಿ ವೃತ್ತದವರೆಗೆ ಸ್ವಚ್ಛತಾ ಕಾರ್ಯ ನಡೆಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !