ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಅಗತ್ಯವೇ?

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯಗಳಲ್ಲಿ ವಿಧಾನಪರಿಷತ್ ಮತ್ತು ಕೇಂದ್ರದಲ್ಲಿ ರಾಜ್ಯಸಭೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಮೇಲ್ಮನೆಯನ್ನು ರದ್ದುಗೊಳಿಸಲಾಗಿದೆ.

ಇದು ಸರಿಯಾದ ನಿರ್ಧಾರವೇ! ಜನರಿಂದ ಗೆಲ್ಲಲಾಗದವರು, ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲಾಗದವರು, ಅನ್ಯ ಮಾರ್ಗಗಳ ಮೂಲಕ ವಿಧಾನಪರಿಷತ್ ಅಥವಾ ರಾಜ್ಯಸಭೆಯನ್ನು ಪ್ರವೇಶಿಸುತ್ತಿರುವುದು ಭಾರತದ ದುರಂತ. ಸಂವಿಧಾನದಲ್ಲಿ ಇವುಗಳ ಬಗ್ಗೆ ಹೇಳಲಾದ ನಿಯಮಗಳನ್ನು ಗಾಳಿಗೆ ತೂರಿ ಸದಸ್ಯರನ್ನು ಆರಿಸಲಾಗುತ್ತಿದೆ. ಹಾಗಾಗಿ ಬುದ್ಧಿಜೀವಿಗಳ, ತಜ್ಞರ ನೆಲೆವೀಡಾಗಬೇಕಿದ್ದ ಈ ಮನೆಗಳು ವಿಧಾನಸಭೆ ಮತ್ತು ಲೋಕಸಭೆಗಳಿಗಿಂತ ಭಿನ್ನವಾಗಿಯೇನೂ ಉಳಿದಿಲ್ಲ.

ಸಂಪುಟದಲ್ಲಿ ಈ ಸದಸ್ಯರಿಗೆ ಸ್ಥಾನ ಕಲ್ಪಿಸುವುದು ಜನವಿರೋಧಿ ನೀತಿಯೇ ಸರಿ.

ವಿಧಾನಪರಿಷತ್ತುಗಳನ್ನು ರದ್ದುಪಡಿಸಿದರೆ ರಾಜ್ಯಗಳ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ, ಒಳದಾರಿಗಳ ಮೂಲಕ ಅನಾಯಾಸವಾಗಿ ಮಂತ್ರಿಗಳಾಗಿ, ಜನರಿಂದ ಆಯ್ಕೆಯಾದ
ವರ ಅವಕಾಶವನ್ನು ಕಿತ್ತುಕೊಂಡು ಮೆರೆಯುವುದೂ ತಪ್ಪುತ್ತದೆ.

ಎನ್. ನರಹರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT