ಭಾನುವಾರ, ಸೆಪ್ಟೆಂಬರ್ 15, 2019
30 °C
ಸತತ 10ನೇ ಬಾರಿಗೆ ಈ ಗೌರವ

ಮಾರಿಕಾಂಬಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

Published:
Updated:
Prajavani

ಶಿರಸಿ: ಶನಿವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜು ಒಟ್ಟು 236 ಅಂಕಗಳಿಸಿ, ಸತತ 10ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದಿದೆ.

ಬಾಲಕಿಯರ ವಿಭಾಗದಲ್ಲಿ ಕೊಕ್ಕೊ, ವಾಲಿಬಾಲ್, ಟೆನ್ನಿಕಾಯ್ಟ್, ಟೇಬಲ್ ಟೆನ್ನಿಸ್, ಯೋಗ, ರಿಲೆಯಲ್ಲಿ ಪ್ರಥಮ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚೈತ್ರ ಶಿರಸಿಕರ್ 100 ಮೀ, ಸ್ಫೂರ್ತಿ ಪೂಜಾರಿ 200 ಮೀ, ಸಹನಾ ಪಟಗಾರ್ 400 ಮೀ ಓಟದಲ್ಲಿ ಪ್ರಥಮ, ಶ್ವೇತಾ ಪಟಗಾರ ಹ್ಯಾಮರ್ ಎಸೆತದಲ್ಲಿ ಪ್ರಥಮ, ತ್ರಿವಿಧ ಜಿಗಿತ ದ್ವಿತೀಯ, ಪ್ರಿಯಾಂಕಾ ಹೆಗಡೆ 110 ಮೀ, ಹರ್ಡಲ್ಸ್ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಟೇಬಲ್ ಟೆನ್ನಿಸ್, ವಾಲಿಬಾಲ್, ಥ್ರೋಬಾಲ್, ರಿಲೆ, ಟೆನ್ನಿಕಾಯ್ಟ್‌, ಕೊಕ್ಕೊದಲ್ಲಿ ಪ್ರಥಮ ಸ್ಥಾನ, ಮಣಿಕಂಠ ನಾಯ್ಕ100 ಮೀ, ಶರತ್ ನಾಯ್ಕ 400 ಮೀ ಹಾಗೂ 800 ಮೀ ಓಟದಲ್ಲಿ ಪ್ರಥಮ, ಸುದೀಪ್ ಪೂಜಾರಿ ಜಾವಲಿನ್, ಅರುಣ್ ಹೆಗಡೆ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶರತ್ ನಾಯ್ಕ ಬಾಲಕರ ವೀರಾಗ್ರಣಿ ಪಡೆದಿದ್ದಾರೆ.

Post Comments (+)