ನವರಾತ್ರಿ ಉತ್ಸವಕ್ಕೆ ಕೆಸರು ಗದ್ದೆ ಓಟ

7
ಮಾರಿಕಾಂಬಾ ದೇವಾಲಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ

ನವರಾತ್ರಿ ಉತ್ಸವಕ್ಕೆ ಕೆಸರು ಗದ್ದೆ ಓಟ

Published:
Updated:
Deccan Herald

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದ ನವರಾತ್ರಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಕೆಸರು ಗದ್ದೆ ಓಟ, ಹಿರಿಯ ನಾಗರಿಕರಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಅ.10ರಿಂದ 18ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶುಕ್ರವಾರ ಇಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ, ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ‘ಜನಪದ ಪರಂಪರೆಯಿರುವ ದೇವಾಲಯದಲ್ಲಿ ಮಣ್ಣಿನ ಸಂಬಂಧ ಬೆಸೆಯುವ ಉದ್ದೇಶದಿಂದ ಈ ಬಾರಿ ರಾಮನಬೈಲಿನ ತಗ್ಗಿನಲ್ಲಿರುವ ಗದ್ದೆಯಲ್ಲಿ ಅ.14ರಂದು ಕೆಸರು ಗದ್ದೆ ಓಟ ಹಮ್ಮಿಕೊಳ್ಳಲಾಗಿದೆ. ನೀರು ತುಂಬಿದ ಕೊಡದ ಓಟ, ಸಹ ನಡೆಯಲಿದೆ. ಹಿರಿಯ ನಾಗರಿಕರಿಗೆ ಓಟ, ಜಿಗಿತ, ಗುಂಡು ಎಸೆತ, ನಡಿಗೆ ಸ್ಪರ್ಧೆ ನಡೆಯುತ್ತದೆ’ ಎಂದರು.

ಉತ್ಸವದ ಅಂಗವಾಗಿ ಅ.10ರಂದು ಫಲಪುಷ್ಪ ಪ್ರದರ್ಶನ, ಹಿಂದೂಸ್ತಾನಿ ಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ವಾದನ, ಭಕ್ತಿಗೀತೆ, ಅ.11ರಂದು ಕೈ ಕೆಲಸ ಪ್ರದರ್ಶನ, ಜನಪದ ಹಾಡುಗಳು, ಹಳ್ಳಿ ಹಾಡುಗಳು, ಅ.೧೨ರಂದು ಭಗವದ್ಗೀತೆ ಶ್ಲೋಕ ಕಂಠಪಾಠ, ಭಾವಗೀತೆ ಸ್ಪರ್ಧೆ, ಅ.13ರಂದು ಆರತಿ ತಾಟು, ಧ್ಯಾನ ಮಾಲಿಕೆ, ಜನಪದ ಗುಂಪು ನೃತ್ಯ, ಅ.14ರಂದು ಚೆಸ್, ಭರತನಾಟ್ಯ, ಅ.15ರಂದು ಸಮೂಹ ದೇಶ ಭಕ್ತಿಗೀತೆ, ಪ್ರಬಂಧ, ಅಂಗನವಾಡಿ ಮಕ್ಕಳ ನೃತ್ಯ, ಅ.16ರಂದು ರಂಗವಲ್ಲಿ, ಸಾಮಾನ್ಯ ಜ್ಞಾನ, ಅಂಗನವಾಡಿ ನೃತ್ಯ, ಅ.17ರಂದು ಚಿತ್ರಕಲೆ ಹಾಗೂ ಚಿಕ್ಕ ಮಕ್ಕಳ ಛದ್ಮವೇಷ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. 

ಕ್ರೀಡಾ ಸ್ಪರ್ಧೆಯ ಭಾಗವಾಗಿ ಅ.7 ಮತ್ತು 8ರಂದು ಕೊಕ್ಕೊ, ವಾಲಿಬಾಲ್, ಹಗ್ಗ ಜಗ್ಗಾಟ, ಪುರುಷರಿಗೆ 3 ಕಾಲಿನ ಓಟ, ಮಹಿಳೆಯರಿಗಾಗಿ ತುಂಬಿದ ಕೊಡ ಹೊತ್ತು ಓಡುವುದು, ಪಟ್ಟದ ರಾಣಿ, ಪಟ್ಟದ ರಾಜ, ಬ್ಯಾಡ್ಮಿಂಟನ್ ಆಟ ನಡೆಯಲಿದೆ. ಅ.19ರಿಂದ ಅ.27ರವರೆಗೆ ಭಕ್ತಿಗೀತೆ, ಭರತನಾಟ್ಯ, ಜಾನಪದ ಗೀತೆ, ಯಕ್ಷಗಾನ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಪಾಧ್ಯಕ್ಷ ಮನೋಹರ ಮಲ್ಮನೆ ಹೇಳಿದರು. ಧರ್ಮದರ್ಶಿಗಳಾದ ಶಶಿಕಲಾ ಚಂದ್ರಾಪಟ್ಟಣ, ಶಾಂತಾರಾಮ ಹೆಗಡೆ, ಲಕ್ಷ್ಮಣ ಕಾನಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !