ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗೆ ‘ಆಧಾರ್ ಆಮಂತ್ರಣ’!

Last Updated 25 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಕಾರವಾರ: ಮದುವೆಯ ಕ್ಷಣವನ್ನು ಅವಿಸ್ಮರಣೀಯ ಮಾಡಲು ಹಲವರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ,ಅಂಕೋಲಾದಯುವಕರೊಬ್ಬರು ಮದುವೆಯ ಆಮಂತ್ರಣ ಪತ್ರಿಕೆಯನ್ನು ಆಧಾರ್‌ ಕಾರ್ಡ್‌ನಂತೆ ಸಿದ್ಧಪಡಿಸಿದ್ದಾರೆ. ಮಧುರ ಕ್ಷಣದ ನೆನಪಿಗೆ ಬಂಧು– ಮಿತ್ರರನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ.

ಶಿರೂರಿನ ರಮೇಶ್ ಹಾಗೂ ಅಂಬಾರಕೊಡ್ಲದ ಸವಿತಾ ಅವರ ವಿವಾಹ ಅಲ್ಲಿನ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಮೇ 10ರಂದು ನಡೆಯಲಿದೆ. ವೃತ್ತಿಯಲ್ಲಿ ಗ್ರಾಫಿಕ್ಸ್ ಮುದ್ರಣ ಮಳಿಗೆ ಹೊಂದಿರುವ ರಮೇಶ್, ಆಮಂತ್ರಣ ಪತ್ರಿಕೆಗಳನ್ನು ಕಲಾತ್ಮಕವಾಗಿ ವಿನ್ಯಾಸ ಮಾಡುತ್ತಾರೆ.ಇದೇರೀತಿತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ವಿಶೇಷವಾಗಿ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.

ಮೇಲ್ನೋಟಕ್ಕೆ ಆಧಾರ್‌ ಗುರುತಿನ ಚೀಟಿಯಂತೆ ಕಾಣುವ ಅವರ ಆಮಂತ್ರಣ ಪತ್ರಿಕೆಯಲ್ಲಿ, ಬಹಳ ಚಿಕ್ಕದಾಗಿ ಹಾಗೂ ಚೊಕ್ಕವಾಗಿ ಮದುವೆಗೆ ಆಮಂತ್ರಿಸಿದ್ದಾರೆ. ಇದರ ಜತೆಗೆ, ‘ಕ್ಯೂಆರ್‌’ ಕೋಡ್‌ ಮುದ್ರಿಸಿದ್ದು, ಇದನ್ನು ಸ್ಕ್ಯಾನ್ ಮಾಡಿದಂತೆ ಅವರ ‘ವಿಡಿಯೊ ಆಮಂತ್ರಣ’ವೂ ತೆರೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT