ಮಂಗಳವಾರ, ಅಕ್ಟೋಬರ್ 22, 2019
22 °C
ಮೌಢ್ಯ ತೊಡೆಯುವ ಪ್ರಯತ್ನ

ನವರಾತ್ರಿಯಲ್ಲಿ ವಿಶಿಷ್ಟ ‘ಮಾತೃವಂದನ’

Published:
Updated:
Prajavani

ಶಿರಸಿ: ಇಲ್ಲಿನ ಸಂಚಲನ ಸಂಸ್ಥೆಯು ಲಯನೆಸ್ ಕ್ಲಬ್ ಹಾಗೂ ಗಾಣಿಗ ಸಮಾಜ ಮಹಿಳಾ ಮಂಡಳಿ ಸಹಯೋಗದಲ್ಲಿ ಇತ್ತೀಚೆಗೆ ಇಲ್ಲಿ ಆಯೋಜಿಸಿದ್ದ ಮಾತೃವಂದನ ಕಾರ್ಯಕ್ರಮವು ವಿಶಿಷ್ಟವಾಗಿ ನೆರವೇರಿತು.

ಸಾಹಿತಿ ಭಾಗೀರಥಿ ಹೆಗಡೆ, ರಮಾ ಪಟವರ್ಧನ, ಲಯನೆಸ್ ಕ್ಲಬ್ ಅಧ್ಯಕ್ಷೆ ವರ್ಷಾ ಪಟವರ್ಧನ, ವತ್ಸಲಾ ಪ್ರಾತಃಕಾಲ, ಶ್ರೀಧರ ಜಿ. ಭಟ್, ಗಾಣಿಗ ಸಮಾಜ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಶೆಟ್ಟಿ, ವೀಣಾ ಶೆಟ್ಟಿ ಅವರು ಮಾತೃತ್ವದ ಕುರಿತು ಹಲವು ಉದಾಹರಣೆಗಳೊಂದಿಗೆ ಮಾತನಾಡಿದರು.

ಸಂಸ್ಥೆಯ ಮುಖ್ಯ ಸಂಚಾಲಕಿ ಸುಧಾ ಭಟ್ ಹರಿಗಾರ ಮಾತನಾಡಿ, ‘ಕಷ್ಟವು ಯಾರಿಗೆ ಬೇಕಾದರೂ ಬರಬಹುದು. ಆದರೆ, ನೊಂದ ಮಹಿಳೆಗೆ ಇನ್ನಷ್ಟು ನೋವನ್ನು ನೀಡುವ ಹಲವು ಮೌಢ್ಯಾಚರಣೆಗಳು ಸಮಾಜದಲ್ಲಿ ರೂಢಿಯಲ್ಲಿವೆ. ಇಂತಹ ಮೂಢನಂಬಿಕೆಗಳನ್ನು ತೊಡೆದು ಹಾಕುವ ಹಾಗೂ ನೊಂದ ಮಹಿಳೆಗೆ ಸಾಂತ್ವನ ನೀಡುವ ಪ್ರಯತ್ನ ಸಂಚಲನ ಸಂಸ್ಥೆಯಿಂದ ಆಗುತ್ತಿದೆ’ ಎಂದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಮಾತೆಯರಿಗೆ ಯಾವ ಭೇದ–ಭಾವವಿಲ್ಲದೇ ಬಾಗಿನ ಅರ್ಪಿಸಿ, ವಂದಿಸಲಾಯಿತು. ಸುಮಂಗಲಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಹೆಗಡೆ ವಂದಿಸಿದರು. ಸುಮಂಗಲಾ ಹೆಗಡೆ, ರತ್ನಾವತಿ ಕಲ್ಮಠ, ಪದ್ಮಾವತಿ ಭಟ್ಟ, ಭಾರತಿ ಹೆಗಡೆ, ಶ್ರೀಮತಿ ಭಟ್ಟ, ಲಕ್ಷ್ಮಿ ಭಟ್ಟ, ವೀಣಾ ಹೆಗಡೆ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)