ಇ–ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯ

7

ಇ–ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯ

Published:
Updated:
Deccan Herald

ಶಿರಸಿ: ಇ– ಖಾತಾ ಸಮಸ್ಯೆಯಿಂದ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಆಗಿದೆ. ತಕ್ಷಣವೇ ನಿಯಮ ಸರಳೀಕರಣ ಮಾಡಬೇಕು ಎಂದು ಒತ್ತಾಯಿತಿ, ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ತಾಲ್ಲೂಕು ಘಟಕದ ಸದಸ್ಯರು ಮಂಗಳವಾರ ಇಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಆಗಿರುವ ತಾಂತ್ರಿಕ ತೊಂದರೆ, ಇ– ಖಾತೆ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಇದಕ್ಕೆ ಕಾರ್ಮಿಕರು, ಶ್ರಮಿಕರು ಬಲಿಪಶುಗಳಾಗುತ್ತಿದ್ದಾರೆ. ಇ ಸ್ವತ್ತು ಸಮಸ್ಯೆ ಪರಿಹಾರ ಹೋರಾಟ ಸಮಿತಿಯ ಹೋರಾಟಕ್ಕೆ ಸಂಘಟನೆ ಬೆಂಬಲ ನೀಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂಘದ ಪ್ರಮುಖರಾದ ರವಿ ಕೊಳೇಕರ, ರಮೇಶ ಹೆಗಡೆ, ರಾಜು ಕಾನಸೂರು, ರವಿ ಹಿರೇಮಠ, ಪಾವದ್, ರವೀಂದ್ರ ಜೆ.ಕೆ, ಎಂ.ಡಿ.ರವಿರಾಜ್, ಸಂತೋಷ ಸಿರ್ಸಿಕರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !