ಶನಿವಾರ, ನವೆಂಬರ್ 28, 2020
17 °C

ಪಿತೃಕಾರ್ಯ ನೆರವೇರಿಸಿದ ಸಚಿವ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ಸೋಮವಾರ ಗೋಕರ್ಣಕ್ಕೆ ಬಂದು ತಮ್ಮ ಮತ್ತು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಪಿತೃಕಾರ್ಯ ನೆರವೇರಿಸಿದರು. ಮೊದಲು ಮಹಾಗಣಪತಿ, ಮಹಾಬಲೇಶ್ವರನ ಆತ್ಮಲಿಂಗ ಹಾಗೂ ಪಾರ್ವತಿಗೆ ಪೂಜೆ ಸಲ್ಲಿಸಿದರು.

ಪಿತೃಶಾಲೆಯಲ್ಲಿ ಪಿತೃಗಳ ಸಂತೃಪ್ತಿಗಾಗಿ ನಾರಾಯಣ ಬಲಿ, ತಿಲಹೋಮ, ತ್ರಿಪಿಂಡಿ ಶ್ರಾದ್ಧ ನೆರವೇರಿಸಿದರು. ದಾನ ಧರ್ಮ, ಭೋಜನ ವ್ಯವಸ್ಥೆ ಏರ್ಪಡಿಸಿ ಧಾರ್ಮಿಕ ಕಾರ್ಯ ನೆರವೇರಿಸಿದರು. ಕ್ಷೇತ್ರ ಪುರೋಹಿತ ವೇದಮೂರ್ತಿ ಚಂದ್ರಶೇಖರ ಅಡಿ ಮೂಳೆ ನೇತೃತ್ವದಲ್ಲಿ ಉಳಿದ ಋತ್ವಿಜರ ಸಹಾಯದಿಂದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.