‘ಸಚಿವ ಹೆಗಡೆ ಹೇಳಿಕೆ ನೋವುಂಟು ಮಾಡಿದೆ’

7

‘ಸಚಿವ ಹೆಗಡೆ ಹೇಳಿಕೆ ನೋವುಂಟು ಮಾಡಿದೆ’

Published:
Updated:

ಕಾರವಾರ:  ‘ಕೇಂದ್ರ ಸಚಿವ ಅನಂತಕುಮಾರ ಹೆಗೆಡೆ ಅವರು ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳುವ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಿರುವುದು ನೋವು ತಂದಿದೆ. ಈ ರೀತಿ ಕೀಳಾಗಿ ಮಾತಾಡುವುದು ಸರಿಯಲ್ಲ’ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಳೆಹಾನಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ಅನಂತಕುಮಾರ ಹೆಗಡೆ ಹಿರಿಯ ರಾಜಕಾರಣಿ. ಅವರು ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ನಾವು ಬೇರೆ ಬೇರೆ ಪಕ್ಷಗಳಲ್ಲಿದ್ದುಕೊಂಡು ಬೇರೆಬೇರೆ ತತ್ವ, ಸಿದ್ಧಾಂತಗಳನ್ನು ನಂಬಿಕೊಂಡಿದ್ದೇವೆ. ಹಾಗಂದ ಮಾತ್ರಕ್ಕೆ ಏನೇನೋ ಮಾತನಾಡುವುದು ಸರಿಯಲ್ಲ’ ಎಂದರು.

ಈಶ್ವರಪ್ಪ ಜ್ಯೋತಿಷಿಯೇ?: ರಾಜ್ಯದ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಆರು ತಿಂಗಳಲ್ಲೇ ಅಧಿಕಾರಿ ಕಳೆದುಕೊಳ್ಳಲಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈಶ್ವರಪ್ಪ ಜ್ಯೋತಿಷಿಯೇ? ಈಗ ಅವರು ಕೆಲಸ ಇಲ್ಲದೇ ಖಾಲಿಯಿರುವ ಕಾರಣ ಜ್ಯೋತಿಷ್ಯದ ತರಗತಿಗೆ ಹೋಗಿ ಹೀಗೆ ಹೇಳಿರಬಹುದು’ ಎಂದು ವ್ಯಂಗ್ಯವಾಡಿದರು.

‘ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಯಾವಾಗ’ ಎಂದು ಕೇಳಿದಾಗ, ‘ಆಯಾ ಜಿಲ್ಲೆಯ ಮಂತ್ರಿಗಳನ್ನು ಅವರದೇ ಜಿಲ್ಲೆಗಳಿಗೆ ನೇಮಿಸಲು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದಷ್ಟೇ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !