ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಿ

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಕರೆ
Last Updated 11 ಜೂನ್ 2022, 14:00 IST
ಅಕ್ಷರ ಗಾತ್ರ

ಶಿರಸಿ: ‘ವನವಾಸಿಗಳನ್ನು ಅತಂತ್ರವಾಗಿಸುವ ಅರಣ್ಯನಾಶದ ಯೋಜನೆ ವಿರುದ್ಧ ಜನತೆ ಗಟ್ಟಿಯಾಗಿ ಧ್ವನಿ ಎತ್ತಬೇಕು. ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.

ತಾಲ್ಲೂಕಿನ ವಾನಳ್ಳಿಯಲ್ಲಿ ನಡೆದ ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಬಾಧಕದ ಕುರಿತು ಜನಜಾಗೃತಿ ಸಭೆ ಹಾಗೂ ಬೇಡ್ತಿ ಕಣಿವೆ ಸಂರಕ್ಷಣೆ ಅಭಿಯಾನದ ಸಭೆಯಲ್ಲಿ ಅವರು ಮಾತನಾಡಿದರು.

ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಯಲ್ಲಾಪುರ ಮತ್ತು ಶಿರಸಿ ತಾಲ್ಲೂಕಿನ ಹಳ್ಳಿಗಳಲ್ಲಿ ನಿರಂತರವಾಗಿ ಸಭೆ ನಡೆಯುತ್ತಿದೆ. ತಾಲ್ಲೂಕಿನ ತಟ್ಟೀಸರ, ಸಾಲ್ಕಣಿ, ವಾನಳ್ಳಿ, ಜಡ್ಡಿಗದ್ದೆ, ಯಲ್ಲಾಪುರದ ಉಮ್ಮಚಗಿ, ಹುಣಸೆಟ್ಟಿಕೊಪ್ಪ, ಇನ್ನಿತರ ಪ್ರದೇಶದಲ್ಲಿ ಸರಣಿ ಸಭೆಗಳು ನಡೆದಿವೆ. ಸಭೆಯಲ್ಲಿ ಪಟ್ಟಣದ ಹೊಳೆ ಶಾಲ್ಮಲಾ, ಬೇಡ್ತಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ನದಿ ಜೋಡಣೆ ಯೋಜನೆ ವಿರುದ್ಧ ಗ್ರಾಮ ಸಭೆಯಲ್ಲಿ ಠರಾವು ಮಾಡಲಾಗುವುದು’ ಎಂದು ಮೇಲಿನ ಓಣಿಕೇರಿ ಗ್ರಾಮ ಪಂಚಾಯ್ತಿ ಸದಸ್ಯ ಜಿ.ವಿ. ಹೆಗಡೆ ತಿಳಿಸಿದರು. ಸಹಕಾರ ಧುರೀಣ ಜಿ.ಟಿ.ಹೆಗಡೆ ತಟ್ಟೀಸರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಪ್ರಧಾನ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ವಿ.ಆರ್.ಹೆಗಡೆ ಮಣ್ಮನೆ, ಆರ್.ಎನ್.ಹೆಗಡೆ ಗೊರ್ಸಗದ್ದೆ, ಎಂ.ಕೆ. ಭಟ್, ಸಮಾವೇಶದ ಸಂಚಾಲಕ ಶ್ರೀಪಾದ ಶಿರನಾಲಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT