ಮಾರುಕಟ್ಟೆಗೆ ನುಗ್ಗಿದ ಮಳೆ ನೀರು

7

ಮಾರುಕಟ್ಟೆಗೆ ನುಗ್ಗಿದ ಮಳೆ ನೀರು

Published:
Updated:
ಕಾರವಾರದ ಗಾಂಧಿ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ಮಳೆ ನೀರು ನಿಂತಿತ್ತು.

ಕಾರವಾರ:  ನಗರದ ಹಾಗೂ ಸುತ್ತಮುತ್ತ ಸೋಮವಾರ ರಾತ್ರಿ ಶುರುವಾದ ಮಳೆ, ಮಂಗಳವಾರ ಬೆಳಿಗ್ಗೆಯೂ ಮುಂದುವರಿಯಿತು. ಇದರಿಂದ ಜನಜೀವನಕ್ಕೆ ಸ್ವಲ್ಪಮಟ್ಟಿಗೆ ತೊಂದರೆಯಾಯಿತು.

ಚರಂಡಿ ಕಟ್ಟಿಕೊಂಡ ಪರಿಣಾಮ ನಗರದ ಗಾಂಧಿ ಮಾರುಕಟ್ಟೆಯ ತುಂಬ ಮಳೆ ನೀರು ನಿಂತಿತ್ತು. ಹೀಗಾಗಿ ವರ್ತಕರು, ಗ್ರಾಹಕರು ಅದೇ ನೀರಿನಲ್ಲಿ ನಡೆದುಕೊಂಡು ಹೋಗಬೇಕಾಯಿತು. ಮಳೆ ನೀರಿನೊಂದಿಗೆ ಕೊಳಚೆ ನೀರು ಕೂಡ ಸೇರಿಕೊಂಡು ಅಲ್ಲಿದ್ದವರು ಹಿಡಿಶಾಪ ಹಾಕುತ್ತಿದ್ದರು. 

ನಗರ ಪೊಲೀಸ್ ಠಾಣೆ ಆವರಣಕ್ಕೂ ಮಳೆ ನೀರು ನುಗ್ಗಿತು. ಆವರಣದಲ್ಲಿ ನಿಲ್ಲಿಸಿದ್ದ ಹತ್ತಾರು ದ್ವಿಚಕ್ರ ವಾಹನಗಳು ಇದರಿಂದಾಗಿ ಅರ್ಧದಷ್ಟು ಭಾಗ ಮುಳುಗಡೆಯಾಗಿದ್ದವು. ಪೊಲೀಸ್ ಸಿಬ್ಬಂದಿ ಕೂಡ ಠಾಣೆಯ ಒಳ ಹೋಗಲು ಪರದಾಡಬೇಕಾಯಿತು.  ಉಳಿದಂತೆ ಕೆಎಚ್‌ಬಿ ಕಾಲೊನಿ, ಸಂಕ್ರಿವಾಡ ಪ್ರದೇಶದಲ್ಲಿ ಕೂಡ ಮಳೆ ನೀರು ರಾದ್ಧಾಂತ ಉಂಟುಮಾಡಿತ್ತು. ರಸ್ತೆಯ ಮೇಲೆ ಮೊಣಕಾಲುದ್ದ ನೀರು ನಿಂತು ಸಾರ್ವಜನಿಕರು ಓಡಾಡಲು ಕಷ್ಟಪಟ್ಟರು. 

ನಗರದಲ್ಲಿ ಮಧ್ಯಾಹ್ನದ ನಂತರ ಬಿಸಿಲು ಕಂಡುಬಂತು. ಆದರೆ, ಸಂಜೆಯ ವೇಳೆಗೆ ಮತ್ತೆ ಮೋಡ ಕವಿಯಲಾರಂಭಿಸಿತು. ಇದೇರೀತಿಯ ವಾತಾವರಣ ಇನ್ನೆರಡು ದಿನ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !