ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಕೆಡಿಪಿ ಸಭೆ: ಮನೆ ತ್ಯಾಜ್ಯಗಳಲ್ಲೂ ಸೊಳ್ಳೆ ಉತ್ಪತ್ತಿ

ನೀರು ನಿಲ್ಲದಂತೆ ಕ್ರಮ ವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳ ಮನವಿ
Last Updated 5 ಜುಲೈ 2019, 12:48 IST
ಅಕ್ಷರ ಗಾತ್ರ

ಕಾರವಾರ: ‘ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಳೆ ನೀರು ನಿಲ್ಲುತ್ತಿರುವುದರಿಂದ ಲಾರ್ವಾಗಳು ಬೆಳೆಯುತ್ತಿವೆ. ಜತೆಗೆ, ಮನೆಗಳಲ್ಲಿ ತ್ಯಾಜ್ಯಗಳನ್ನು ಬಹು ದಿನಗಳಿಂದಒಂದೆಡೆ ಹಾಕಿಡುವುದರಿಂದಲೂಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರ ನಿಯಂತ್ರಣವೂ ದೊಡ್ಡ ಸಮಸ‌್ಯೆಯಾಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸೂರಜ ನಾಯ್ಕ ಹೇಳಿದರು.

ತಾಲ್ಲೂಕು ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,‘ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ನಗರಭೆ ಹಾಗೂ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಿದ್ದೇವೆ. ಈಗಾಗಲೇ ಈ ಬಗ್ಗೆ ಸಭೆಯನ್ನೂ ನಡೆಸಲಾಗಿದೆ. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ನೀಡಲೂಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರೂ ಗಮನ ಹರಿಸಬೇಕಿದೆ’ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಕೊಠಡಿಯಲ್ಲಿ ಫ್ಯಾನ್ ಸೇರಿದಂತೆಮೂಲ ಸೌಕರ್ಯಗಳು ಸರಿಯಾಗಿಲ್ಲ. ಆಸ್ಪತ್ರೆಯಲ್ಲಿ ದೂರು ಪುಸ್ತಕವನ್ನೂ ಸರಿಯಾಗಿ ನಿರ್ವಹಣೆ ಮಾಡಿಲ್ಲ’ ಎಂಬ ಅಧ್ಯಕ್ಷೆ ಪ್ರಮೀಳಾ ನಾಯ್ಕ ಅವರ ದೂರಿಗೆ, ‘ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದ ವಿಷಯಗಳನ್ನು ತಾಲ್ಲೂಕು ಪಂಚಾಯ್ತಿಯಲ್ಲಿ ಮಾತನಾಡಿದರೆ ಫಲವಿಲ್ಲ. ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಾಗುತ್ತಾರೆ. ನಾವುಅವರಿಗೆ ಯಾವುದೇ ಸಲಹೆಗಳನ್ನು ನೀಡಲೂ ಆಗುವುದಿಲ್ಲ. ಹೀಗಾಗಿ, ಅವರ ಅಧಿಕಾರಿಯೊಬ್ಬರು ಈ ಸಭೆಗೆ ಹಾಜರಿರುವಂತೆ ಮಾಡಬೇಕು’ ಎಂದು ಡಾ.ಸೂರಜ ಮನವಿ ಮಾಡಿಕೊಂಡರು.

‘ಅಂಗನವಾಡಿ ಸ್ಥಳಾಂತರಕ್ಕೂ ಜಾಗವಿಲ್ಲ’:

‘ಹಣಕೋಣ, ಬಸ್ಸುಣಗಾ ಸೇರಿದಂತೆ ವಿವಿಧೆಡೆಯ ಅಂಗನವಾಡಿಗಳಲ್ಲಿ ಪಾಠ ಹಾಗೂ ಅಡುಗೆ ತಯಾರಿ ಒಂದೇ‌ ಕಡೆನಡೆಯುತ್ತಿದೆ. ಬೇರೆ ಕಟ್ಟಡಕ್ಕೆಸ್ಥಳಾಂತರಿಸಲೂವ್ಯವಸ್ಥೆ ಇಲ್ಲ. ಈ ಬಗ್ಗೆ ಕ್ರಮ‌ ಕೈಗೊಳ್ಳಿ’ ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದರು

‘ಅಂಗನವಾಡಿ ಕಟ್ಟಡ ದುರಸ್ತಿ ಇದ್ದರೆ ಕ್ರಿಯಾಯೋಜನೆ ಸಿದ್ಧಪಡಿಸಿ ಮೇಲ್ವಿಚಾರಕರ ಮೂಲಕ ತಾಲ್ಲೂಕು ಪಂಚಾಯ್ತಿಗೆ ಸಲ್ಲಿಸಿ. ಅರ್ಧ ಹಣ ಹಾಕಿ ಅರೆಬರೆ ಕೆಲಸ ಮಾಡದೇ ಪೂರ್ಣಗೊಳಿಸಿ’ ಎಂದು‌ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಸಲಹೆ ನೀಡಿದರು.

‘ಪೋಸ್ಟ್ ಚೆಂಡಿಯಾ ಅಂಗನವಾಡಿಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಉದ್ಘಾಟನೆ ಆಗಿಲ್ಲ’ ಎಂದುಸದಸ್ಯೆ ನಂದಿನಿ ಗುನಗಿವಿಷಯ ಪ್ರಸ್ತಾಪಿಸಿದರು. ಅದಕ್ಕೆ ದನಿಗೂಡಿಸಿದ ಪುರುಷೋತ್ತಮ ಗೌಡ, ‘ಶಾಸಕರಿಗೆ ಹೇಳಿ ಉದ್ಘಾಟನೆ ಮಾಡಿಸಲು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

‘ಬಸ್‌ಸಂಚಾರಕ್ಕೆಕ್ರಮ ವಹಿಸಿ’:

‘ಹರ್ಟುಗಾ, ಕುಚೇಗಾರದಿಂದ ವಿದ್ಯಾರ್ಥಿಗಳು ಕೆರವಡಿಯ ಕಾಲೇಜಿಗೆ ಹೋಗಬೇಕಿದೆ. ಅವರಿಗೆ ಸರಿಯಾದ ವಾಹನಗಳ ವ್ಯವಸ್ಥೆ ಇಲ್ಲ. ಹೀಗಾಗಿ, ಅವರಿಗೆ ಅನುಕೂಲ ಆಗುವಂತೆ ಸಾರಿಗೆ ಬಸ್‌ ವ್ಯವಸ್ಥೆ ಮಾಡಿಕೊಡುವಂತೆ ಈ ಹಿಂದೆಯೇ ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದ್ದೆ. ಆದರೆ, ಇನ್ನೂ ಕ್ರಮವಾಗಿಲ್ಲ’ ಎಂದು ಪ್ರಮೀಳಾ ನಾಯ್ಕ ಹೇಳಿದರು. ಸಾರಿಗೆ ಘಟಕದ ಅಧಿಕಾರಿ, ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT