ಗುರುವಾರ , ನವೆಂಬರ್ 21, 2019
20 °C

ಭಟ್ಕಳ: ವಸತಿ ಗೃಹದಲ್ಲಿ ಯುವಕನ‌ ಕೊಲೆ

Published:
Updated:

ಭಟ್ಕಳ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾನುಭಾಗ ಡಿಲಕ್ಸ್ ವಸತಿ ಗೃಹದಲ್ಲಿ ಶನಿವಾರ ತಡರಾತ್ರಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದಾರೆ.

ಇಲ್ಲಿನ  ಮುಗಳಿಹೊಂಡದ ಸಫ್ಹಾನ್ (26) ಕೊಲೆಗೀಡಾದವರು. ಮೂರ್ನಾಲ್ಕು ಜನರು ಶನಿವಾರ ರಾತ್ರಿ ಶಾನುಭಾಗ್ ಡಿಲಕ್ಸ್ ವಸತಿಗೃಹದಲ್ಲಿ ಕೊಠಡಿ ಪಡೆದು ಬಹಳ ಸಮಯದವರೆಗೆ ಮಾತುಕತೆ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಅಲ್ಲಿಂದ ಹೊರಬಂದು ಓಡಿ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಆರೋಪಿಗಳಲ್ಲಿ ಒಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪಂಚನಾಮೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಯಾವುದೋ ವ್ಯವಹಾರದ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿ, ಅದು ಕೊಲೆಯಲ್ಲಿ ಅಂತ್ಯಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಪ್ರತಿಕ್ರಿಯಿಸಿ (+)