ಗುರುವಾರ , ಮೇ 19, 2022
20 °C

ವಿಶ್ವನಾಥ್‍ಗೆ ಕನಕಶ್ರೀ, ಭಾರತಿಗೆ ರಾಗರತ್ನ ಬಿರುದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಖ್ಯಾತ ಸಂಗೀತ ಕಲಾವಿದರಾದ ಭಾರತಿ ಪ್ರತಾಪ್ ಅವರಿಗೆ ‘ರಾಗರತ್ನ’ ಹಾಗೂ ವಿಶ್ವನಾಥ್ ಕಾನ್ಹರೆ ಅವರಿಗೆ ‘ಕನಕಶ್ರೀ’ ಬಿರುದುಗಳನ್ನು ರಾಗಮಿತ್ರ ಪ್ರತಿಷ್ಠಾನದ ವತಿಯಿಂದ ಶನಿವಾರ ಪ್ರದಾನ ಮಾಡಲಾಯಿತು.

ಇಲ್ಲಿನ ಯೋಗ ಮಂದಿರದಲ್ಲಿ ಬೆಂಗಳೂರಿನ ಸಪ್ತಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಯನ-ವಾದನ-ಸಮ್ಮಾನ ಕಾರ್ಯಕ್ರಮದ ಮೂಲಕ ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ, ಸಂಗೀತ ಕಾರ್ಯಕ್ರಮ ನಡೆಯಿತು.

ಭಾರತಿ ಪ್ರತಾಪ್ ಗಾಯನ ಮನಸೆಳೆಯಿತು. ವಿಶ್ವನಾಥ್ ಕಾನ್ಹರೆ ಮುಂಬೈ ಪ್ರದರ್ಶಿಸಿದ ಹಾರ್ಮೊನಿಯಮ್ ಸೋಲೋ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶಶಿಭೂಷಣ ಗುರ್ಜರ್,  ಶ್ರೀಧರ ಮಾಂಡ್ರೆ ತಬಲಾ ಮತ್ತು ಪ್ರಕಾಶ್ ಹೆಗಡೆ ಯಡಳ್ಳಿ, ದತ್ತರಾಜ್  ಹಾರ್ಮೊನಿಯಮ್, ಸಾಧನಾ ರಾವ್ ಹಾಗೂ ಗೀತಾ ಜೋಶಿ ತಾನ್ಪುರದಲ್ಲಿ ಸಾಥ್ ನೀಡಿದರು.

ಡಾ.ಸುಮನ್ ದಿನೇಶ್ ಹೆಗಡೆ ಸಂಗೀತದ ಮಹತ್ವ ತಿಳಿಸಿದರು. ವಿ.ಎ.ಹೆಗಡೆ ಬೆಳ್ಳೇಕೇರಿ ಹಾಗೂ ವೀರಭದ್ರ ಗೌಡರ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಪ್ತಕ ಸಂಸ್ಥೆಯ ಜಿ.ಎಸ್.ಹೆಗಡೆ ಬೆಂಗಳೂರು ಶುಭನುಡಿಗಳನ್ನಾಡಿದರು. ರಘುಪತಿ ಭಟ್ ಸುಗವಿ ಅಧ್ಯಕ್ಷತೆ ವಹಿಸಿದ್ದರು. ಶಿರಸಿ ರತ್ನಾಕರ ಇವರು ನಿರ್ವಹಿಸಿದರು. ಪ್ರಾಚಾರ್ಯ ಪ್ರಕಾಶ್ ಹೆಗಡೆ ವಂದಿಸಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು