ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣವಲ್ಲಿ ಮಠದಿಂದ ಪರಿಹಾರ ನಿಧಿಗೆ ನೆರವು

Last Updated 7 ಏಪ್ರಿಲ್ 2020, 14:41 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್–19 ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಪರಿಹಾರ ನಿಧಿಗೆ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ವತಿಯಿಂದ ₹ 1ಲಕ್ಷ ಮೊತ್ತದ ಚೆಕ್ ನೀಡಲಾಯಿತು.

ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಚೆಕ್ ಅನ್ನು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಹಸ್ತಾಂತರಿಸಿದರು.

ಸಿಎಂ ನಿಧಿಗೆ ದೇಣಿಗೆ:ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು, ರಾಜ್ಯ ಸರ್ಕಾರ ನೀಡುವ ಗೌರವಧನ ₹ 1ಲಕ್ಷ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಒಟ್ಟು ನಾಲ್ಕು ತಿಂಗಳುಗಳ ಗೌರವಧನದ ಮೊತ್ತವನ್ನು ಸೇರಿಸಿ ನೀಡಿದ ಅವರು, ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಮಂಗಳವಾರ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ನೀಡಿದರು.

ಅಕಾಡೆಮಿ ಅಧ್ಯಕ್ಷರಾಗಿ 18 ತಿಂಗಳು ಕೆಲಸ ಮಾಡಿರುವ ಅವರು, ಪ್ರತಿ ತಿಂಗಳ ಗೌರವಧನ ₹ 25ಸಾವಿರ ಮೊತ್ತವನ್ನು ಅಶಕ್ತ ಕಲಾವಿದರು, ಮಕ್ಕಳ ಶಿಬಿರ, ಕಲಾ ಸೇವೆ ಸಲ್ಲಿಸುವವರು ಹೀಗೆ ಅವಶ್ಯವುಳ್ಳವರಿಗೆ ನೀಡುತ್ತ, ತೆರೆಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT