ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ : ಸ್ಥಳೀಯರಲ್ಲಿ ಮಲೇರಿಯಾದ ಒಂದೂ ಪ್ರಕರಣವಿಲ್ಲ–ಜಿಲ್ಲಾ ಆರೋಗ್ಯಾಧಿಕಾರಿ

ಹೊರ ರಾಜ್ಯ, ಜಿಲ್ಲೆಗಳಿಂದ ಬಂದ ಕೆಲವರಲ್ಲಿ ಪತ್ತೆ
Last Updated 25 ಏಪ್ರಿಲ್ 2019, 12:04 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸ್ಥಳೀಯರಲ್ಲಿಒಂದೂ ಮಲೇರಿಯಾ ಪ್ರಕರಣ ಕಂಡುಬಂದಿಲ್ಲ. ಹೊರ ರಾಜ್ಯಗಳಿಂದ, ಜಿಲ್ಲೆಗಳಿಂದ ಬಂದವರಲ್ಲಿ ಈ ಜ್ವರ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ್ ತಿಳಿಸಿದರು.

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಐದು ವರ್ಷಗಳಿಂದ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ವರ್ಷಉತ್ತರಕನ್ನಡದಲ್ಲಿದೃಢಪಟ್ಟಿರುವ ಎಲ್ಲ ಪ್ರಕರಣಗಳು ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಬಂದವರಲ್ಲಿ ಕಂಡುಬಂದಿವೆ. ಸಮೀಪದ ದಕ್ಷಿಣ ಕನ್ನಡ, ಉಡುಪಿ, ಗೋವಾಕ್ಕೆ ಹೋಗಿ ಬಂದವರಲ್ಲಿ ಮಲೇರಿಯಾ ಪತ್ತೆಯಾಗಿದೆ. ಅವರಲ್ಲಿ ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳ ಕಾರ್ಮಿಕರೇ ಅಧಿಕವಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ರಾಷ್ಟ್ರೀಯ ರೋಗವಾಹಕಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾ.ರಮೇಶ ರಾವ್ ಮಾತನಾಡಿ, ‘2022ರ ವೇಳೆಗೆ ದೇಶದಲ್ಲಿ ಒಂದೂ ಮಲೇರಿಯಾ ಪ್ರಕರಣಗಳಿಲ್ಲದಂತೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ವರದಿಯಾಗುವ ಪ್ರಕರಣಗಳ ಪೈಕಿ ಶೇ 75ರಷ್ಟು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ ಕಂಡುಬರುತ್ತಿವೆ. ವೇಗವಾಗಿ ಬೆಳೆಯುತ್ತಿರುವ ಈ ನಗರಗಳಲ್ಲಿ ಕಟ್ಟಡ ಕಾಮಗಾರಿ ವ್ಯಾಪಕವಾಗಿ ಆಗುತ್ತಿದೆ. ಕಾಂಕ್ರೀಟ್ ಕಟ್ಟಡಗಳಲ್ಲಿ ನೀರು ನಿಲ್ಲಿಸುವುದು ಹಾಗೂ ಟ್ಯಾಂಕ್‌ಗಳಲ್ಲಿ ನೀರು ತುಂಬಿಡುವ ಕಾರಣ ಸೊಳ್ಳೆಗಳ ಸಂತಾನಾಭಿವೃದ್ಧಿ ಆಗುತ್ತಿದೆ’ ಎಂದು ವಿವರಿಸಿದರು.

‘ಇಡೀ ಪ್ರಪಂಚದಲ್ಲಿ ವರದಿಯಾಗುವ ಮಲೇರಿಯಾ ಪ್ರಕರಣಗಳಲ್ಲಿ ಶೇ 90ರಷ್ಟು ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಶೇ 6ರಷ್ಟಿದ್ದು, ವರ್ಷಕ್ಕೆ ಸರಾಸರಿ 15 ಲಕ್ಷ ಪ್ರಕರಣಗಳು ದೃಢಪಡುತ್ತಿವೆ. ಅವುಗಳಲ್ಲಿ ಒಂದು ಸಾವಿರದಷ್ಟು ಜನರು ಮೃತಪಟ್ಟಿದ್ದಾರೆ. ಉಳಿದ ಶೇ 4ರಷ್ಟು ಪ್ರಕರಣಗಳು ಇತರ ದೇಶಗಳಿಂದ ಬರುತ್ತಿವೆ’ ಎಂದು ತಿಳಿಸಿದರು.

‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’:ಈ ಬಾರಿಯ ವಿಶ್ವ ಮಲೇರಿಯಾ ದಿನಾಚರಣೆಗೆ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬ ಘೋಷವಾಕ್ಯ ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಅನುಗುಣವಾಗಿ ಸೊಳ್ಳೆಗಳ ನಿಯಂತ್ರಣದ ಮೂಲಕ ರೋಗ ಹರಡದಂತೆ ತಡೆಯಬೇಕು ಎಂದು ಕ್ಯಾ.ರಮೇಶ ರಾವ್ ತಿಳಿಸಿದರು.

ಸೊಳ್ಳೆ ಕಚ್ಚದಂತೆ ತಡೆಯುವುದು ಮತ್ತು ಅವುಗಳು ನೀರಿನ ಸಂಪರ್ಕಕ್ಕೆ ಬಂದು ಮೊಟ್ಟೆಯಿಡದಂತೆ ತಡೆಯಬೇಕು. ಇದರಿಂದ ಬಹುಪಾಲು ಯಶಸ್ಸು ಸಿಕ್ಕಿದಂತೆಯೇ ಆಗುತ್ತದೆ ಎಂದು ಹೇಳಿದರು.

ಕೀಟನಾಶಕದಿಂದ ಉಪಚರಿಸಿದ ಸೊಳ್ಳೆ ಪರದೆಯ ಬಳಕೆ, ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಸುವುದು, ಸೊಳ್ಳೆ ಬತ್ತ, ಮುಲಾಮುಗಳ ಉಪಯೋಗ, ಸಂಜೆ ಬೇವಿನಸೊಪ್ಪಿನ ಹೊಗೆ ಹಾಕುವ ಮೂಲಕ ಸೊಳ್ಳೆಗಳು ನಮಗೆ ಕಚ್ಚದಂತೆ ತಡೆಯಬಹುದು. ಅಂತೆಯೇ ಲಾರ್ವಾಗಳ ನಿಯಂತ್ರಣ, ಕೀಟ ನಾಶಕ ಸಿಂಪಡಣೆ, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಗಪ್ಪಿ, ಗ್ಯಾಂಬೂಸಿಯಾ ಮೀನುಗಳನ್ನು ನೀರಿಗೆ ಬಿಡುವುದೂ ಸೂಕ್ತ ಕ್ರಮಗಳು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT