ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ: ಅನಧಿಕೃತ ಹೋಂ ಸ್ಟೇ ಮುಚ್ಚಲು ಸೂಚನೆ

ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆ
Last Updated 2 ಫೆಬ್ರುವರಿ 2021, 14:11 IST
ಅಕ್ಷರ ಗಾತ್ರ

ಜೊಯಿಡಾ: ‘ತಾಲ್ಲೂಕಿನಲ್ಲಿ ಅನಧಿಕೃತವಾಗಿ ರ‍್ಯಾಫ್ಟಿಂಗ್, ಹೋಮ್ ಸ್ಟೇ, ರೆಸಾರ್ಟ್ ನಡೆಸುತ್ತಿರುವವರು 15 ದಿನಗಳ ಒಳಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಇಲ್ಲದಿದ್ದರೆ ಅವುಗಳನ್ನು ಮುಚ್ಚಲಾಗುವುದು’ ಎಂದು ತಹಶೀಲ್ದಾರ್‌ ಸಂಜಯ ಕಾಂಬಳೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಜಲಕ್ರೀಡೆ ಆಯೋಜಿಸಲಾಗುತ್ತಿದೆ. ಅನಧಿಕೃತವಾಗಿ ಹೋಮ್ ಸ್ಟೇಗಳನ್ನು ನಡೆಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಹಮ್ಮಿಕೊಳ್ಳಲಾಗಿತ್ತು. ರೆಸಾರ್ಟ್ಸ್‌ ಮತ್ತು ಹೋಮ್ ಸ್ಟೇ ಮಾಲಿಕರುಉ ಭಾಗವಹಿಸಿದ್ದರು.

‘ರ‍್ಯಾಫ್ಟಿಂಗ್ ಆಯೋಜಕರು ಪ್ರವಾಸಿಗರ ಎಲ್ಲ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಲೈಫ್‌ ಜಾಕೆಟ್‌ ಸ್ವಚ್ಛವಾಗಿರಬೇಕು. ಈ ಬಗ್ಗೆ ಪರಿಶೀಲನೆಗೆ ತಂಡ ರಚಿಸಲಾಗುವುದು. ನಿಯಮದ ಉಲ್ಲಂಘನೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರ‍್ಯಾಫ್ಟಿಂಗ್ ಆಯೋಜಿಸುವವರು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಹೋಂ ಸ್ಟೇ ಮಾಲೀಕರು ಪರಿಸರಕ್ಕೆ ಮತ್ತು ಪ್ರಾಣಿ–ಪಕ್ಷಿಗಳಿಗೆ ತೊಂದರೆ ಆಗುವಂತೆ ಧ್ವನಿವರ್ಧಕಗಳನ್ನು ಬಳಸಬಾರದು. ಕಾನೂನಿನ ಪ್ರಕಾರವೇ ಹೋಮ್ ಸ್ಟೇ ನಡೆಸಬೇಕು. ನಿಯಮಬದ್ಧವಾಗಿಯೇ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಅಧಿಕೃತ ಪರವಾನಗಿ ಇಲ್ಲದವರು ಅವುಗಳನ್ನು ಸ್ಥಗಿತಗೊಳಿಸಬೇಕು’ ಎಂದು ಸಿ.ಪಿ.ಐ ಬಾಬಾ ಸಾಹೇಬ ಹುಲ್ಲಣ್ಣನವರ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ರವಿ, ತಾಲ್ಲೂಕಿನ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರು ಹಾಗೂ ರ‍್ಯಾಫ್ಟಿಂಗ್ ಆಯೋಜಕರಯ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT