ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,000 ಫಲಾನುಭವಿಗಳಿಗೆ ಪಿಂಚಣಿ ಆದೇಶ

Last Updated 18 ಆಗಸ್ಟ್ 2022, 15:49 IST
ಅಕ್ಷರ ಗಾತ್ರ

ಕಾರವಾರ: ಕಂದಾಯ ಇಲಾಖೆಯ ವಿನೂತನ ಯೋಜನೆ ‘ಹಲೋ ಕಂದಾಯ ಸಚಿವರೇ’ ಮೂಲಕ ಪಿಂಚಣಿ ಸೌಲಭ್ಯ ಮತ್ತು ಆದೇಶ ಪಡೆದ 1,000 ಫಲಾನುಭವಿಗಳಿಗೆ ಈವರೆಗೆ ದಾಖಲೆಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಜೂನ್ 13ರಂದು ಈ ಯೋಜನೆ ಆರಂಭವಾಗಿತ್ತು.

1,000ನೇ ಫಲಾನುಭವಿ ಕಾರವಾರ ತಾಲ್ಲೂಕಿನ ಚೆಂಡಿಯಾದ ಮಧುಕರ ತುವಾ ನಾಯ್ಕ (71) ಅವರ ಮನೆಗೆ ಗುರುವಾರ ತೆರಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಆದೇಶವನ್ನು ಹಸ್ತಾಂತರಿಸಿದರು.

ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದಲ್ಲಿ ಏ.15ರಂದು ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಕಂದಾಯ ಸಚಿವ ಆರ್.ಅಶೋಕ್, ‘ಹಲೋ ಕಂದಾಯ ಸಚಿವರೇ’ ಕಾರ್ಯಕ್ರಮವನ್ನು ಪ್ರಕಟಿಸಿದ್ದರು.

ಶುಲ್ಕ ರಹಿತ ದೂರವಾಣಿ ಸಂಖ್ಯೆ: 155245ಕ್ಕೆ ಕರೆ ಮಾಡಿ, ಆಧಾರ್ ಸಂಖ್ಯೆ ನೀಡಿದ್ದಲ್ಲಿ ಅರ್ಹ ಫಲಾನುಭವಿಗಳಿಗೆ 72 ಗಂಟೆಗಳ ಒಳಗಾಗಿ ಪಿಂಚಣಿ ಸೌಲಭ್ಯ ಮತ್ತು ಆದೇಶದ ಪ್ರತಿಯನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇದಾಗಿದೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಶ್ಚಲ್ ನರೋನಾ, ಗ್ರೇಡ್ 2 ತಹಶೀಲ್ದಾರ್ ಶ್ರೀದೇವಿ ಭಟ್, ಅಧಿಕಾರಿಗಳಾದ ಪ್ರಶಾಂತ ಎಸ್.ಹೆಚ್, ಬಸವರಾಜ ಭಜಂತ್ರಿ, ವಿ.ಕೆ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT