ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ವೇಲ್– ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ರೈಲು

Last Updated 15 ಆಗಸ್ಟ್ 2022, 16:06 IST
ಅಕ್ಷರ ಗಾತ್ರ

ಕಾರವಾರ: ಚೌತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ಪನ್ವೇಲ್– ಮಂಗಳೂರು ಸೆಂಟ್ರಲ್ ನಡುವೆ ‘ಒನ್ ವೇ ಸ್ಪೆಷಲ್’ ರೈಲು ಸಂಚಾರವನ್ನು ಕೊಂಕಣ ರೈಲ್ವೆ ಪ್ರಕಟಿಸಿದೆ.

06049 ಸಂಖ್ಯೆಯ ರೈಲು ಸೆ.10ರಂದು (ಶನಿವಾರ) ಬೆಳಿಗ್ಗೆ 10.45ಕ್ಕೆ ಪನ್ವೇಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 6ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. 21 ಬೋಗಿಗಳ ಈ ರೈಲಿಗೆ ಕಾರವಾರ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಮಂಗಳೂರು ಜಂಕ್ಷನ್‌ ನಿಲ್ದಾಣಗಳಲ್ಲಿ ನಿಲುಗಡೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT