ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಈರುಳ್ಳಿ ಕೆ.ಜಿ.ಗೆ ₹200

ಕಾರವಾರದಲ್ಲಿ ಭಾನುವಾರದ ಸಂತೆ: ದರದಲ್ಲಿ ದಾಖಲೆಯ ಜಿಗಿತ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಕಾರವಾರ: ದಿನದಿಂದ ದಿನಕ್ಕೆ ದುಬಾರಿಯಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವಈರುಳ್ಳಿಯು ದಾಖಲೆಯ ಏರಿಕೆ ಕಂಡಿದೆ. ಈಚೆಗಷ್ಟೇ ಪ್ರತಿ ಕೆ.ಜಿ.ಗೆ₹ 150ರ ದರ ಹೊಂದಿದ್ದ ಈರುಳ್ಳಿ ಭಾನುವಾರದ ಸಂತೆಯಲ್ಲಿ ₹ 200ಕ್ಕೆ ಮಾರಾಟವಾಗಿದೆ.

ಪುಣೆಯಿಂದ ಆವಕವಾಗಿದ್ದ ಈರುಳ್ಳಿಯು ಉತ್ತಮ ಗುಣಮಟ್ಟದ್ದಾಗಿದ್ದು, ಪ್ರತಿ ಕೆ.ಜಿ.ಗೆ₹ 200 ಕೊಟ್ಟು ಗ್ರಾಹಕರು ಖರೀದಿ ಮಾಡಿದರು. ರಾಜ್ಯದ ಇತರೆಡೆಗಳಿಂದ ಬಂದಿದ್ದ ಈರುಳ್ಳಿಯ ಗುಣಮಟ್ಟ ಸ್ವಲ್ಪ ಕಡಿಮೆ ಇದ್ದಿದ್ದರಿಂದ ಪ್ರತಿ ಕೆ.ಜಿ.ಗೆ₹ 160ಕ್ಕೆ ಮಾರಾಟವಾಯಿತು.

ತೀರಾ ಕಳಪೆ ಮಟ್ಟದ, ಅರೆಬರೆ ಕೊಳೆತ ಈರುಳ್ಳಿಗೂ ಪ್ರತಿ ಕೆ.ಜಿ.ಗೆ₹ 100 ರಿಂದ₹ 120 ದರವನ್ನು ನಿಗದಿ ಮಾಡಲಾಗಿತ್ತು. ದುಬಾರಿ ಬೆಲೆಯ ಕಾರಣದಿಂದಾಗಿ ಈರುಳ್ಳಿ ಖರೀದಿಗೆ ಬಹಳಷ್ಟು ಗ್ರಾಹಕರು ಹಿಂದೇಟು ಹಾಕಿದರು.

ಕೊಳ್ಳುವವರಿಲ್ಲದೇ ವ್ಯಾಪಾರಿಗಳಿಗೂ ನಷ್ಟ...

‘ಮೊದಲೆಲ್ಲಾ ಸಂತೆಯಲ್ಲಿ ದಿನಕ್ಕೆ ₹ 15 ರಿಂದ ₹ 20 ಸಾವಿರದಷ್ಟು ಮೊತ್ತದ ಈರುಳ್ಳಿ ವ್ಯಾಪಾರವಾಗುತ್ತಿತ್ತು. ಆದರೆ, ಈ ವಾರ ಹೆಚ್ಚು ತುಟ್ಟಿಯಾಗಿರುವುದರಿಂದ ಗ್ರಾಹಕರು ಖರೀದಿಗೆ ಮುಂದಾಗಲಿಲ್ಲ. ದರ ಕೇಳಿಯೇ ವಾಪಸ್ ಹೋದರು. ಈ ವಾರ ಕೇವಲ₹ 2,000 ಮೊತ್ತದ ಈರುಳ್ಳಿ ಮಾತ್ರ ಮಾರಾಟವಾಗಿದೆ’ ಎಂದು ಹಾವೇರಿಯಿಂದ ಬಂದಿದ್ದ ಈರುಳ್ಳಿ ವ್ಯಾಪಾರಿ ಸೈನಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT