ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 60 ಲಕ್ಷ ಸಾಲ ಕೊಡುವುದಾಗಿ ₹ 24 ಲಕ್ಷ ವಂಚನೆ!

Last Updated 5 ಅಕ್ಟೋಬರ್ 2019, 16:04 IST
ಅಕ್ಷರ ಗಾತ್ರ

ಕಾರವಾರ: ಹೊಸದಾಗಿ ವ್ಯವಹಾರ ಆರಂಭಿಸಲು ₹ 60 ಲಕ್ಷ ಸಾಲ ಸಿಗುವ ವಿಶ್ವಾಸದಲ್ಲಿದ್ದ ವ್ಯಕ್ತಿಯೊಬ್ಬರು ₹24 ಲಕ್ಷ ಕಳೆದುಕೊಂಡಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಹಿಟ್ಟಳ್ಳಿಯ ವಿಘ್ನೇಶ್ವರ ಹೆಗಡೆ ಎಂಬುವವರುಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಆರಂಭಿಸಲು ಹಣಕಾಸಿನ ನೆರವಿಗೆ ಹುಡುಕಾಡುತ್ತಿದ್ದರು. ಈ ಸಂಬಂಧ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ www.capitalmorganfinancial.com ಎಂಬ ವೆಬ್‌ಸೈಟ್ ವಿಳಾಸ ಕಾಣಿಸಿತು. ಅದರಲ್ಲಿದ್ದ ಡೇವಿಡ್ ಪ್ಯಾಟ್ರಿಕ್ ಎಂಬಾತನಮೊಬೈಲ್ ಸಂಖ್ಯೆಯಿತ್ತು.ಆತನಿಗೆ ಕರೆ ಮಾಡಿದಾಗ, ತನ್ನನ್ನು ಕಂಪನಿಯ ನಿರ್ದೇಶಕ ಎಂದು ಪರಿಚಯಿಸಿಕೊಂಡ. ತಮಗೆ ಹಣಕಾಸಿನ ಅವಶ್ಯಕತೆ ಇರುವ ಬಗ್ಗೆ ವಿಘ್ನೇಶ್ವರ ಹೆಗಡೆ ಆತನ ಬಳಿ ನಿವೇದಿಸಿಕೊಡರು.

ಡೇವಿಡ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯು ಅಮೆರಿಕ ಮೂಲದ್ದಾಗಿದೆ. ₹ 60 ಲಕ್ಷ ಸಾಲ ಕೊಡಿಸಲು ಸಾಧ್ಯವಿದೆ. ಹಣ ವರ್ಗಾವಣೆ ಮಾಡುವ ವಿವಿಧ ಪ್ರಕ್ರಿಯೆಗಳಿಗೆಹಣನೀಡಬೇಕಾಗುತ್ತದೆ ಎಂದುಕತೆ ಕಟ್ಟಿದ್ದ. ಆ ಶುಲ್ಕ ಈ ಶುಲ್ಕ ಎಂದು ನಂಬಿಸಿ ನಮ್ಮ ದೇಶದವಿವಿಧೆಡೆ ಇರುವ ಬ್ಯಾಂಕ್ಖಾತೆಗಳಿಗೆ ಒಟ್ಟು ₹ 24 ಲಕ್ಷವನ್ನು ಜಮಾ ಮಾಡಿಸಿಕೊಂಡ. ಆದರೆ, ಸಾಲವನ್ನೂ ಕೊಡಲಿಲ್ಲ, ಜಮೆ ಮಾಡಿಸಿಕೊಂಡ ಹಣವನ್ನೂ ಮರಳಿಸಿಲ್ಲ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.ಇಲ್ಲಿನ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT