ಮಂಗಳವಾರ, ನವೆಂಬರ್ 12, 2019
28 °C

ಮುಕ್ತ ಕಬಡ್ಡಿ ಪಂದ್ಯ 23ರಿಂದ

Published:
Updated:

ಶಿರಸಿ: ರಚನಾತ್ಮಕ ಚಟುವಟಿಕೆ ಮೂಲಕ ಗುರುತಿಸಿಕೊಂಡಿರುವ ಇಲ್ಲಿನ ಬಾರ್ ಬೆಂಡಿಂಗ್ ಮತ್ತು ಸೆಂಟರಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ನ.23 ಹಾಗೂ 24ರಂದು ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯವು ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘಟಕರು ಮಾಹಿತಿ ನೀಡಿದರು. ಸಂಘಟನೆಯು ಪ್ರತಿವರ್ಷ ಅಂಗನವಾಡಿ ಮಕ್ಕಳಿಗೆ ಬೆಂಚ್, ಸಂಘದ ಸದಸ್ಯರ ಮಡದಿಯರು ಹೆರಿಯಾದ ಸಂದರ್ಭದಲ್ಲಿ ಹೆರಿಗೆ ಭತ್ಯೆ ನೀಡಿ ನೆರವಾಗುತ್ತಿದೆ. ಈ ಬಾರಿ ಕಬಡ್ಡಿ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಥಮ ₹ 50ಸಾವಿರ, ದ್ವಿತೀಯ ₹ 30ಸಾವಿರ, ತೃತೀಯ ₹ 10ಸಾವಿರ ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಹುಬ್ಬಳ್ಳಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನ.8ರಿಂದ 20ರ ಒಳಗಾಗಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 9242697538, 9448441130 ಈ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದರು.

ಸಂಘಟನೆ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಪ್ರಕಾಶ ಸಾಲೇರ, ಖಜಾಂಚಿ ಆನಂದ ಸಾಲೇರ, ಪ್ರಮುಖರಾದ ಬಾಬು ಹನುಮಂತಿಕರ್, ಸುನೀಲ ಮಡಗಾಂವಕರ್, ಸತೀಶ ಕುರಬರ್, ಮಲ್ಲಿಕಾರ್ಜುನ ಹಾದಿಮನಿ, ಪ್ರಕಾಶ ನಾಯ್ಕ, ಪರಶುರಾಮ, ಜಾನ್ ನರೊನ್ಹಾ, ನಾಸಿರ್ ಖಾನ್ ಮತ್ತಿತರರು ಇದ್ದರು.

 

ಪ್ರತಿಕ್ರಿಯಿಸಿ (+)