ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬಿತ್ತನೆ ಬೀಜ ವಿತರಣೆ

Last Updated 8 ಜೂನ್ 2019, 12:00 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಭತ್ತದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ಕೃಷಿ ಇಲಾಖೆಯಿಂದಬಿತ್ತನೆಬೀಜವನ್ನು ರಿಯಾಯಿತಿ ದರದಲ್ಲಿಶುಕ್ರವಾರವಿತರಿಸಲಾಯಿತು.

ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕುಪಂಚಾಯ್ತಿಅಧ್ಯಕ್ಷೆನರ್ಮದಾ ಪಾಟ್ನೇಕರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ನಾಯ್ಕ ಹಾಗೂ ಸಂಜಯ ಹಣಬರ ಭಾಗವಹಿಸಿದ್ದರು. ಕೃಷಿ ಇಲಾಖೆ ಆಯ್ಕೆ ಮಾಡಿದ ಅರ್ಹ ರೈತರಿಗೆ ಭತ್ತದ ಬೀಜ ಪ್ಯಾಕೇಟ್‌ಗಳನ್ನು ವಿತರಿಸಿದರು.

ಭತ್ತದ ಬೀಜದ 25 ಕೆ.ಜಿಯ ಪ್ಯಾಕೆಟ್‌ಗೆಮೂಲ ಬೆಲೆ ₹ 700 ಇದ್ದು, ಸರ್ಕಾರ ₹ 200 ರಿಯಾಯಿತಿ ನೀಡಿದೆ. ಪರಮೇಶ್ವರ ಹೆಗಡೆ, ಪ್ರಕಾಶ ಕುಶಾಲಕರ, ಪ್ರಭಾಕರ ಹರಿಜನ, ಅಶೋಕ ದೇಸಾಯಿ, ಗಣಪತಿ ಹರಿಜನ, ವಿಶ್ವನಾಥ ನಾಯ್ಕ ಬೀಜದ ಪ್ಯಾಕೆಟ್‌ಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಜೊಯಿಡಾ ತಾಲ್ಲೂಕು ಪಂಚಾಯ್ತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತಿ ವರ್ಷ ತಾಲ್ಲೂಕಿನ ಅರ್ಹ ರೈತರಿಗೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬೀಜಗಳನ್ನು, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ನೀಡುತ್ತಿದ್ದೇವೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ.ಮಾನೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT