ಶನಿವಾರ, ಡಿಸೆಂಬರ್ 7, 2019
21 °C

ನಕಲಿ ಪೊಲೀಸನ ಪತ್ತೆಗೆ ಜಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಪೊಲೀಸ್ ಸಮವಸ್ತ್ರ ಧರಿಸಿ ಬಂದು ಸಿಒಡಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಗರದ ವಿವಿಧ ರಕ್ತ ತಪಾಸಣಾ ಪ್ರಯೋಗಾಲಯಕ್ಕೆ ನುಗ್ಗಿ, ಒತ್ತಾಯಪೂರ್ವಕವಾಗಿ ದಾಖಲೆಗಳನ್ನು ಪಡೆದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.

ಕಾರವಾರ ಎಸ್ಪಿ ಕಚೇರಿಯಿಂದ ಬಂದಿರುವುದಾಗಿ ಹೇಳಿರುವ ವ್ಯಕ್ತಿ, ತನ್ನ ಹೆಸರು ಮಹೇಶ ಎಂದು ಹೇಳಿಕೊಂಡಿದ್ದಾನೆ. ಬೇರೆ ಬೇರೆ ಲ್ಯಾಬ್‌ಗಳಿಗೆ ಹೋಗಿ ಅಲ್ಲಿರುವ ದಾಖಲೆಗಳನ್ನು ಸಂಗ್ರಹಿಸಿರುವ ಈತ, ಕೆಲವರಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಈತನ ನಡವಳಿಕೆ ಬಗ್ಗೆ ಸಂದೇಹ ಬಂದ ಲ್ಯಾಬಿನವರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನ ಮೇಲೆ ಬಂದ ಇನ್ನೊಬ್ಬ ವ್ಯಕ್ತಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾನೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಹೆಲ್ಮೆಟ್ ಧರಿಸಿದ್ದ ನಕಲಿ ಪೊಲೀಸನ ಚಿತ್ರ ಸೆರೆಯಾಗಿದೆ. ಈತನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸ್ತೂರಬಾ ನಗರದ ಮಹೇಶ ಹರಿಕಂತ್ರ ಅವರು ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು