ಶುಕ್ರವಾರ, ನವೆಂಬರ್ 22, 2019
22 °C

‘ಕರೋಡ್‌ಪತಿ’ ಆಸೆಯಲ್ಲಿ ಹಣ ಕಳೆದುಕೊಂಡರು!

Published:
Updated:

ಕಾರವಾರ: ‘ಕೌನ್ ಬನೇಗಾ ಕರೋಡ್‌ಪತಿಯಿಂದ (ಕೆ.ಬಿ.ಸಿ) ₹ 25 ಲಕ್ಷದ ಲಾಟರಿ ಗೆದ್ದಿದ್ದೀರಿ’ ಎಂಬ ಸುಳ್ಳು ಕರೆಗೆ ಮೋಸ ಹೋದ ವ್ಯಕ್ತಿಯೊಬ್ಬರು ₹ 40 ಸಾವಿರ ಹಣ ಕಳೆದುಕೊಂಡಿದ್ದಾರೆ.

ಗೌಂಡಿ ಕೆಲಸ ಮಾಡುವ, ಶಿರಸಿಯ ಹವಾಲ್ದಾರ ಗಲ್ಲಿಯ ಅಬ್ದುಲ್ ಖಾದರ್ ಮೋಸ ಹೋದವರು. ಅವರಿಗೆ ಸೆ.17ರಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಲಾಟರಿ ಗೆದ್ದಿದ್ದೀರಿ ಎಂದು ನಂಬಿಸಿದ್ದಾನೆ. ಜತೆಗೆ, ವಾಟ್ಸ್‌ ಆ್ಯಪ್‌ನಲ್ಲಿ ಇದಕ್ಕೆ ಸಂಬಂಧಿಸಿ ವಿಡಿಯೊವನ್ನೂ ಕಳುಹಿಸಿ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಎಂದು ರಾಣಾ ಪ್ರತಾಪ ಸಿಂಗ್ ಎಂಬಾತನ ಮೊಬೈಲ್ ಸಂಖ್ಯೆ ನೀಡಿದ್ದ. ರಾಣಾ, ‘ಕೆಬಿಸಿ’ ವ್ಯವಸ್ಥಾಪಕ ಎಂದು ವ್ಯಕ್ತಿ ನಂಬಿಸಿದ್ದ.

ಮಾರನೇ ದಿನವೇ ಅಬ್ದುಲ್ ಆತನಿಗೆ ಕರೆ ಮಾಡಿದ್ದಾರೆ. ಈ ವೇಳೆ ಆತ, ಆಯ್ಕೆ ಶುಲ್ಕ, ಜಿ.ಎಸ್‌.ಟಿ ಎಂದೆಲ್ಲ ಮೂರು ಬಾರಿ ಹಣವನ್ನು ತನ್ನ ಬ್ಯಾಂಕ್‌ ಖಾತೆಗೆ ಠೇವಣಿ ಮಾಡಿಸಿಕೊಂಡಿದ್ದ.

‘ಇದೀಗ ಅದೇ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ಡ್ ಆಫ್ ಬರುತ್ತಿದ್ದು, ಹಣವನ್ನು ಆತನಿಂದ ಮರಳಿಸಬೇಕು’ ಎಂದು ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)