ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳ ಸಂರಕ್ಷಣೆಯೇ ಪರಿಹಾರ

ಫೋನ್ ಇನ್ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಮೊಹಮ್ಮದ್ ರೋಶನ್
Last Updated 10 ಮಾರ್ಚ್ 2020, 13:03 IST
ಅಕ್ಷರ ಗಾತ್ರ

ಕಾರವಾರ: ‘ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಅಥವಾ ಕೊಳವೆಬಾವಿ ಕೊರೆಯುವುದು ಪರಿಹಾರವಲ್ಲ. ಮಳೆ ನೀರು ಸಂಗ್ರಹ,ತೆರೆದ ಬಾವಿಯಂತಹಜಲಮೂಲಗಳ ಸಂರಕ್ಷಿಸಲು ಆದ್ಯತೆ ನೀಡಬೇಕಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಮೊಹಮ್ಮದ್ರೋಶನ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ‘ವಾರ್ತಾ ಸ್ಪಂದನ - ನೇರ ಫೋನ್ ಇನ್ ಹಾಗೂ ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಫೋನ್ ಕರೆಯೊಂದಕ್ಕೆ ಅವರು ಉತ್ತರಿಸಿದರು.

14ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯ್ತಿಗಳಲ್ಲಿ ಅನುದಾನವಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಆದ್ಯತೆ ಮೇರೆಗೆ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಸಾರ್ವಜನಿಕರು ಕೂಡ ಸಲಹೆ, ಸೂಚನೆ ನೀಡಬೇಕು’ ಎಂದರು.

ಮುಂಡಗೋಡ ತಾಲ್ಲೂಕಿನ ಬಸಾಪುರದ ರಾಜೇಶ.ಪಿ ಎಂಬುವವರು ಕರೆ ಮಾಡಿ, ತಮ್ಮ ಗ್ರಾಮದ ರಸ್ತೆ ಸಮಸ್ಯೆ ಮತ್ತು ಎಸ್.ಸಿ, ಎಸ್.ಟಿ ಅನುದಾನದಡಿ ಇರುವ ನಿವೇಶನಗಳಿಗೆ ಅರ್ಜಿ ಸ್ವೀಕರಿಸುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರೋಶನ್, ‘ಆನ್‍ಲೈನಲ್ಲಿ ತಾಂತ್ರಿಕ ದೋಷವಿದ್ದು, ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಎಸ್.ಸಿ, ಎಸ್.ಟಿ ಅನುದಾನ ಆಗಿರುವು ಕಾರಣ ತಮಗೆ ಆದ್ಯತೆ ಮೇರೆಗೆ ಮನೆ ಮಂಜೂರು ಮಾಡಲಾಗುವುದು. ಜೊತೆಗೆ ರಸ್ತೆ ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಕೆರವಡಿ ಗ್ರಾಮದಿಂದಕರೆ ಮಾಡಿದ ರೋಹಿತ ದೇವಿದಾಸ,ಗ್ರಾಮದಲ್ಲಿರಸ್ತೆ ಕಾಮಗಾರಿಗಾಗಿ ಪೈಪ್‌ಲೈನ್ ತೆಗೆದಿದ್ದು, ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಸಿ.ಇ.ಒ ಏಪ್ರಿಲ್ ಅಥವಾ ಮೇ ತಿಂಗಳ ಒಳಗೆ ರಸ್ತೆ ಮತ್ತು ಪೈಪ್‌ಲೈನ್ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರೋಶನ್, ‘ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ‌ಫೋನ್ ಇನ್ ಕಾರ್ಯಕ್ರಮದ ಮೂಲಕ ವಿವರವಾಗಿ ತಿಳಿಯಲು ಸಾಧ್ಯವಿದೆ’ ಎಂದರು.

‘ನೀರು ಬಳಕೆಗೆ ಚಿಂತನೆ’

ಮುಂಡಗೋಡ ತಾಲ್ಲೂಕಿನ ಮಡಕೇಶ್ವರದಿಂದ ಗ್ರಾಮಸ್ಥರೊಬ್ಬರು ಮಾಡಿದ ಕರೆಗೆ ಉತ್ತರಿಸಿದ ರೋಶನ್, ‘ಧರ್ಮಾ ಜಲಾಶಯದ ನೀರನ್ನು ಕುಡಿಯುವ ನೀರು ಯೋಜನೆಗೆ ಬಳಸುವ ವಿಚಾರ ಚೆನ್ನಾಗಿದೆ. ಆದರೆ, ಅದುಕೃಷಿನೀರಾವರಿಗೆ ಬಳಸಲಾಗುತ್ತಿದೆ. ಅಲ್ಲದೇ ನೀರನ್ನುಶುದ್ಧೀಕರಿಸಬೇಕಿದೆ. ಈ ನಿಟ್ಟಿನಲ್ಲಿಹಾವೇರಿ ಜಿಲ್ಲೆ ಸವಣೂರು ಉಪವಿಭಾಗಾಧಿಕಾರಿ ಜೊತೆ ಚರ್ಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT