ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ ಹರಾಜು: ಮೊದಲ ದಿನ ₹37.25 ಲಕ್ಷ ಆದಾಯ

Last Updated 10 ಮಾರ್ಚ್ 2022, 14:55 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಬಿಡ್ಕಿಬೈಲ್‍ನ ಮಾರಿಕಾಂಬಾ ದೇವಿ ಗದ್ದುಗೆ ಪಕ್ಕದ ಮಳಿಗೆಗಳ ಹರಾಜು ಪ್ರಕ್ರಿಯೆ ಗುರುವಾರ ಆರಂಭಗೊಂಡಿದೆ. ಮೊದಲ ದಿನ 75 ಮಳಿಗೆಗಳು ಹರಾಜಾಗಿದ್ದು ದೇವಸ್ಥಾನಕ್ಕೆ ₹37.25 ಲಕ್ಷ ಆದಾಯ ಸಂಗ್ರಹವಾಯಿತು.

ಗದ್ದುಗೆ ಸಮೀಪದ ಮಳಿಗೆಯೊಂದು ಗರಿಷ್ಠ ₹1.58 ಲಕ್ಷಕ್ಕೆ ಖರೀದಿಯಾಯಿತು. ₹50 ಸಾವಿರದಿಂದ ₹1 ಲಕ್ಷದ ಮೊತ್ತದಲ್ಲಿ ಹಲವು ಮಳಿಗೆಗಳು ಹರಾಜುಗೊಂಡವು. ಒಟ್ಟೂ 232 ಮಳಿಗೆಗಳನ್ನು ದೇವಸ್ಥಾನದವರು ಹರಾಜು ಮೂಲಕ ನೀಡಲಿದ್ದಾರೆ. ಶನಿವಾರದವರೆಗೂ ಈ ಪ್ರಕ್ರಿಯೆ ನಡೆಯಲಿದೆ.

ಕೋಣನಬಿಡ್ಕಿ, ಬಿಡ್ಕಿಬೈಲ್ ಪ್ಲಾಟುಗಳ ಹರಾಜಿನಿಂದ ಈವರೆಗೆ ದೇವಸ್ಥಾನಕ್ಕೆ ಸುಮಾರು ₹98 ಲಕ್ಷ ಆದಾಯ ಸಂಗ್ರಹವಾಗಿದೆ ಎಂದು ಧರ್ಮದರ್ಶಿ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT