ಜಾನುವಾರು ಅಕ್ರಮ ಸಾಗಣೆಗೆ ಪೊಲೀಸರ ತಡೆ

7
ಒಂದು ವಾರದಲ್ಲಿ ಮೂರನೇ ಬಾರಿ ಕಾರ್ಯಾಚರಣೆ: ಆರೋಪಿಗಳು ವಶಕ್ಕೆ

ಜಾನುವಾರು ಅಕ್ರಮ ಸಾಗಣೆಗೆ ಪೊಲೀಸರ ತಡೆ

Published:
Updated:
Deccan Herald

ಗೋಕರ್ಣ: ಸಮೀಪದ ರಾಷ್ಟ್ರೀಯ ಹೆದ್ದಾರಿ ಹಿರೇಗುತ್ತಿಯ ಚೆಕ್‌ಪೋಸ್ಟ್ ಬಳಿ ಪರವಾನಗಿ ಇಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಎಂಟು ಕೋಣಗಳು ಹಾಗೂ 15 ಎಮ್ಮೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಗೋಕರ್ಣ ಪಿಎಸ್ಐ ಎಂ.ಸಂತೋಷಕುಮಾರ ನೇತೃತ್ವದ ತಂಡ ವಶಕ್ಕೆ ಪಡೆದು ಸೋಮವಾರ ನ್ಯಾಯಾಲಯಕ್ಕೆ ಒಪ್ಪಿಸಿದೆ.

ಕೇರಳದ ಕಾಸರಗೋಡಿನವರಾದ ಲಾರಿ ಚಾಲಕ ಅಬೂಬಕ್ಕರ್ ಮಹಮ್ಮದ್ (48), ಮಹಮ್ಮದ್ ಫಾರೂಕ್ ಅಬ್ದುಲ್ (33), ಮಹಮ್ಮದ್ ಅಶ್ರಫ್ ಅಬ್ದುಲ್ (36) ಹಾಗೂ ಹಾಸನ ಜಿಲ್ಲೆ ಹಳಿಕೊಪ್ಪಲು ನಿವಾಸಿ ಮಂಜೇಗೌಡ ಜವರೇಗೌಡ (60) ಬಂಧಿತರು. ಜಾನುವಾರು ಖರೀದಿಸಿದ್ದ ಕಾಸರಗೋಡಿನ ಅಹಮ್ಮದ್ ಮತ್ತು ಲಾರಿ ಮಾಲೀಕ ಗೋವಾದ ಸಿ.ಕೆ.ಎ.ಉಸ್ಮಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಆರೋಪಿಗಳು ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಬೈಲಹೊಂಗಲದಿಂದ ಕಾಸರಗೋಡಿಗೆ ಸಾಗಿಸುತ್ತಿದ್ದರು. ₹4.50 ಲಕ್ಷ ಮೌಲ್ಯದ ಕೋಣ ಮತ್ತು ಎಮ್ಮೆಗಳನ್ನು, ₹ 10 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರಂತರ ಕಾರ್ಯಾಚರಣೆ: 

ಹಿರೇಗುತ್ತಿ ಚೆಕ್‌ಪೋಸ್ಟ್ ಬಳಿ ಗೋಕರ್ಣ ಪೊಲೀಸರು ಒಂದು ವಾರದಲ್ಲಿ ಮೂರನೇ ಬಾರಿ ಇಂತಹ ಕಾರ್ಯಾಚರಣೆ ನಡೆಸಿದ್ದಾರೆ.

ಒಂದು ವಾರದಲ್ಲಿ ₹12 ಲಕ್ಷ ಮೌಲ್ಯದ 26 ಎತ್ತುಗಳು, ₹4.50 ಲಕ್ಷ ಮೌಲ್ಯದ ಎಂಟು ಕೋಣಗಳು ಮತ್ತು 15 ಎಮ್ಮೆಗಳನ್ನು, ₹20 ಲಕ್ಷ ಮೌಲ್ಯದ ಎರಡು ಕಂಟೇನರ್‌ಗಳನ್ನು, ₹ 2 ಲಕ್ಷ ಮೌಲ್ಯದ ಒಂದು ಟೊಯೊಟಾ ಕಾರು ಹಾಗೂ ₹ 5 ಲಕ್ಷ ಮೌಲ್ಯದ ಜೀಪ್ ಮಾದರಿಯ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

‘ಮೇಲಧಿಕಾರಿಗಳ ಆದೇಶ’: ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೇಲಧಿಕಾರಿಗಳ ಆದೇಶದಂತೆ ನಿರಂತರವಾಗಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಜಾನುವಾರು ಅಕ್ರಮ ಸಾಗಾಟ ತಪ್ಪಿಸಿದರೆ ಕೋಮು ಗಲಭೆಗೆ ಆಸ್ಪದ ಇಲ್ಲದಂತಾಗುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪಿಎಸ್ಐ ಸಂತೋಷಕುಮಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !