ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅಡಿಕೆಯ ತರಹೇವಾರಿ ಉತ್ಪನ್ನ

ಅಡಿಕೆ ದಬ್ಬೆಯಿಂದ ಸೋಫಾ, ತೂಗುಯ್ಯಾಲೆ ತಯಾರಿಕೆ
Last Updated 1 ಜನವರಿ 2022, 6:08 IST
ಅಕ್ಷರ ಗಾತ್ರ

ಶಿರಸಿ: ತಾಂಬೂಲಕ್ಕಷ್ಟೇ ಅಡಿಕೆಯ ಬಳಕೆಯಲ್ಲ, ಅಡಿಕೆಯಿಂದ ತರಹೇವಾರಿ ಉತ್ಪನ್ನ ತಯಾರಿಸುವ ಸಾಧ್ಯತೆಯು ಬೆಳೆಗಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ಸಾಂಪ್ರದಾಯಿಕವಾಗಿ ಅಡಿಕೆಯನ್ನು ತಾಂಬೂಲಕ್ಕೆ, ಪೂಜೆ–ಪುನಸ್ಕಾರಕ್ಕೆ ಬಳಕೆ ಮಾಡಲಾಗುತ್ತಿದೆ. ಮೌಲ್ಯವರ್ಧನೆ ಮೂಲಕ ಅಡಿಕೆಗೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು, ಪ್ರಗತಿಪರ ರೈತರು ಹಲವಾರು ಉತ್ಪನ್ನಗಳನ್ನು ಕಂಡುಹಿಡಿದಿದ್ದಾರೆ. ಅಂತಹ ಉತ್ಪನ್ನಗಳನ್ನು ರೈತರಿಗೆ ಪರಿಚಯಿಸುವ ಪ್ರಯತ್ನವನ್ನು ತೋಟಗಾರಿಕಾ ಇಲಾಖೆ ಮಾಡಿತು.

ನಗರದಲ್ಲಿ ನಡೆದ ಫಲಪುಷ್ಪ ಮೇಳದಲ್ಲಿ ಅಡಿಕೆಯಿಂದ ತಯಾರಿಸಿದ 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸ್ವೀಟ್ ಸುಪಾರಿ, ಕಷಾಯಪುಡಿ, ಚಟ್ನಿಪುಡಿ, ಕೂಲ್ ಡ್ರಿಂಕ್ಸ್ ಪೌಡರ್, ವೈನ್, ಉಪ್ಪಿನಕಾಯಿ, ಚಹಾಪುಡಿ, ಚಾಕೊಲೆಟ್, ಸಾಬೂನು, ಪೇಸ್ಟ್, ಮುಲಾಮು, ವಿನೆಗರ್, ಸಿರಪ್, ಅರೇಕಾ ಸ್ಪ್ರೇ, ಅರೆಕಾ ಮಿಕ್ಸ್‌, ರಸಂ ಪೌಡರ್, ಸಾಸ್ ಮೊದಲಾದ ಆಹಾರ ಪದಾರ್ಥಗಳು ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿದವು.

‘ಅಡಿಕೆ ಮರ, ಹಾಳೆಯನ್ನು ಬಳಸಿ ತಟ್ಟೆ, ಚಮಚ, ಟೋಪಿ, ಹೂವು, ಹೂಗುಚ್ಛ, ಕಪ್, ಹಾರ, ಅಡಿಕೆ ದಬ್ಬೆಯ ಉಯ್ಯಾಲೆ, ಬಾಗಿಲು, ಕುರ್ಚಿ, ಟೇಬಲ್ ಹೀಗೆ ಮನೆಯ ಸೌಂದರ್ಯ ವೃದ್ಧಿಸುವ ಕಲಾಕೃತಿಗಳನ್ನು ತಯಾರಿಸಬಹುದಾಗಿದೆ. ಬಣ್ಣದ ಹೂಗಳು, ಆಕರ್ಷಕ ಟೋಪಿ, ಚಾಲಿ, ಫ್ಯಾಕ್ಟ್ರಿ, ಕೆಂಪಡಿಕೆ, ಬೆಟ್ಟೆ, ಆಪಿ, ಹಾಲಡಿಕೆ ನಾನಾ ತರಹದ ಕಟಿಂಗ್‌ಗಳ ಮೂಲಕವೂ ಅಡಿಕೆಗೆ ಮಾರುಕಟ್ಟೆ ಹೆಚ್ಚಿಸಬಹುದು’ ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ.

‘ಅಡಿಕೆ ಬೆಳೆಯ ಪ್ರದೇಶ ವಿಸ್ತರಣೆಯಾಗುತ್ತಿದೆ. ಅಡಿಕೆಗೆ ಭವಿಷ್ಯವಿಲ್ಲ ಎಂಬ ಕೂಗು ಸದಾ ಬೆಳೆಗಾರರ ನಿದ್ದೆ ಕಂಗೆಡಿಸುತ್ತದೆ. ಈ ನಡುವೆ ಇಂತಹ ಉತ್ಪನ್ನಗಳನ್ನು ಪರಿಚಯಿಸಿದರೆ, ಬೆಳೆಗಾರರಿಗೆ ಅನುಕೂಲ’ ಎಂದು ಬೆಳೆಗಾರ ಸುಬ್ರಾಯ ಹೆಗಡೆ ಪ್ರತಿಕ್ರಿಯಿಸಿದರು.

*

ಅಡಿಕೆ ಬೆಳೆಯ ಸಾಧ್ಯತೆಗಳ ಬಗ್ಗೆ ಅರಿವು ಮೂಡಿದರೆ, ಇದರಿಂದ ಪ್ರೇರಿತರಾದವರು ಕ್ರಿಯಾಶೀಲವಾಗಿ ಯೋಚಿಸಿ, ಹೊಸ ಉದ್ಯಮದ ಆರಂಭಿಸಲಿ ಎಂಬುದು ನಮ್ಮ ಆಶಯವಾಗಿದೆ.
–ಸತೀಶ ಹೆಗಡೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT