ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಪ್ರಮಥ್ ಭಟ್

Last Updated 20 ಅಕ್ಟೋಬರ್ 2021, 14:02 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಭೈರುಂಬೆ ಸಮೀಪದ ಅಗಸಾಲ ಮೂಲದ ಪ್ರಮಥ್ ಭಟ್ ಎಂಬ ಎರಡು ವರ್ಷದ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿದ್ದಾನೆ.

ವಯಸ್ಸಿಗೆ ಮೀರಿದ ಅಗಾಧ ನೆನಪಿನ ಶಕ್ತಿ ನೆನಪಿನ ಹೊಂದಿರುವುದು ಇದಕ್ಕೆ ಕಾರಣವಾಗಿದೆ. 25ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳು, 15 ತರಕಾರಿಗಳು, 21 ಬಗೆಯ ಹಣ್ಣುಗಳು, 19 ವಾಹನಗಳು, 21 ಅಂಗಾಂಗಗಳು, 1 ರಿಂದ 10ರ ವರೆಗಿನ ಅಂಕಿಗಳನ್ನು ತಪ್ಪಿಲ್ಲದೆ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಸಂಸ್ಕೃತದಲ್ಲಿ ಹೇಳುವ ಬಾಲಕನ ಪ್ರತಿಭೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆ ಸಮಿತಿಯೂ ಮೆಚ್ಚುಗೆ ವ್ಯಕ್ತಪಡಿಸಿದೆ.

ರಾಶಿ, ನಕ್ಷತ್ರ, ಸಂಸ್ಕೃತ ಹಾಡುಗಳು, ಶ್ಲೋಕಗಳನ್ನು ಪಟಪಟನೆ ಹೇಳುವ ಈತನ ಜಾಣ್ಮೆ ಅಚ್ಚರಿ ಮೂಡಿಸಿದೆ. ಮಗನ ಪ್ರತಿಭೆ ಕುರಿತ ವಿಡಿಯೋದೊಂದಿಗೆ ಆನ್‍ಲೈನ್ ಮೂಲಕ ಪಾಲಕರು ಅರ್ಜಿ ಸಲ್ಲಿಸಿದ್ದರು. ಆಯ್ಕೆಗೆ ಪರಿಗಣಿಸಿದ ಸಮಿತಿ ಈತನ ಪರೀಕ್ಷೆ ನಡೆಸಿತ್ತು.

ಪ್ರಮಥ್ ಸದ್ಯ ಶೃಂಗೇರಿಯಲ್ಲಿ ವಾಸವಿದ್ದಾನೆ. ಈತನ ತಂದೆ ಪ್ರಸಾದ ಭಟ್ ಅಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಾಯಿ ಮಂಗಳಗೌರಿ ಭಟ್ ಕೂಡ ಪ್ರಾಧ್ಯಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT