ಮಂಗಳವಾರ, ನವೆಂಬರ್ 19, 2019
27 °C

ಪ್ರತಿಭಾ ಕಾರಂಜಿ: ಲಯನ್ಸ್ ಮಕ್ಕಳ ಸಾಧನೆ

Published:
Updated:
Prajavani

ಶಿರಸಿ: ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ಲಯನ್ಸ್ ಶಾಲೆಯ ಮಕ್ಕಳು ಒಂಭತ್ತು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.

ಮೇಘಾ ರಾಯ್ಕರ್ (ರಂಗೋಲಿ), ಮಹಿಮಾ ಹೆಗಡೆ (ಸಂಸ್ಕೃತ ಧಾರ್ಮಿಕ ಪಠಣ), ಪೂರ್ವಿ ಆಚಾರ್ಯ (ತುಳು ಭಾಷಣ), ಅಮೃತಾ ಹೆಗಡೆ (ಭಾವಗೀತೆ), ಅನ್ನಪೂರ್ಣೇಶ್ವರಿ ಬೆಲ್ಲದ (ಜಾನಪದ ಗೀತೆ), ನಿಖಿಲ್ ಹೆಗಡೆ (ಭರತನಾಟ್ಯ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಣವ ಹೆಗಡೆ, ಆಯುಷ್ ಯಾಜಿ, ಶ್ರೀಷ ಹೆಗಡೆ, ಚಂದನ ಹೆಗಡೆ, ಸಂಕೇತ ನಾಯಕ, ನಿಖಿಲ್ ಹೆಗಡೆ, ವಾಸವಿ ಜೋಶಿ, ಮಾನಸಾ ನಾಯ್ಕ, ಮಹಿಮಾ ಹೆಗಡೆ ಒಳಗೊಂಡ ತಂಡ ನಾಟಕದಲ್ಲಿ ಪ್ರಥಮ ಬಹುಮಾನ ಗಳಿಸಿದೆ.

ಕೀರ್ತಿ ಶಾನಭಾಗ ಕೊಂಕಣಿ ಭಾಷಣ ದ್ವಿತೀಯ, ದೀಪ್ತಿ ಭಟ್ ಸಂಸ್ಕೃತ ಭಾಷಣ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸ್ಕಂದ ಶೆಟ್ಟಿ, ಶಿವನ್ ಪಟಗಾರ ರಸಪ್ರಶ್ನೆ ಹಾಗೂ ದೀಪ್ತಿ ನಾಯ್ಕ ಇಂಗ್ಲಿಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)