ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಸಂಸದ: 23ಕ್ಕೆ ಉತ್ತರ! ಮತ ಎಣಿಕೆಗೆ ಕುಮಟಾದಲ್ಲಿ ಸಕಲ ಸಿದ್ಧತೆ ಪೂರ್ಣ

ಲೋಕಸಭಾ ಚುನಾವಣೆ
Last Updated 21 ಮೇ 2019, 12:47 IST
ಅಕ್ಷರ ಗಾತ್ರ

ಕಾರವಾರ:ಲೋಕಸಭಾ ಕ್ಷೇತ್ರಕ್ಕೆಏಪ್ರಿಲ್ 23ರಂದು ನಡೆದ ಚುನಾವಣೆಯ ಮತ ಎಣಿಕೆಗೆ ಕುಮಟಾದ ಎ.ವಿ.ಬಾಳಿಗಾ ಕಾಲೇಜಿನಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಇಲ್ಲಿ ಮಾಡಲಾಗಿರುವ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿರುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಅಡಗಿದೆ.ಗೆಲುವು ಯಾರ ಪಾಲಿಗೆ ಎಂಬ ಒಂದು ತಿಂಗಳ ಪ್ರಶ್ನೆಗೆ ಉತ್ತರ ಸಿಗಲುಇನ್ನೊಂದೇ ದಿನ ಬಾಕಿಯಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಜಿಲ್ಲೆಯ ಆರು ಮತ್ತು ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 1,922 ಮತಗಟ್ಟೆಗಳಿವೆ.

ಎಷ್ಟು ಸುತ್ತು ಮತ ಎಣಿಕೆ?:ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆಯನ್ನು 14ರಿಂದ ಭಾಗಿಸಿದಾಗ ಬರುವ ಸಂಖ್ಯೆಯಷ್ಟು ಸುತ್ತುಗಳ ಮತ ಎಣಿಕೆ ನಡೆಯಲಿದೆ. ಉದಾಹರಣೆಗೆ, ಹಳಿಯಾಳವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. ಇದನ್ನು 14ರಿಂದ ಭಾಗಿಸಿದರೆ15.5 ಆಗುತ್ತದೆ. ಅಂದರೆ, 15 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಇದೇ ನಿಯಮವನ್ನೇ ಉಳಿದ ಕ್ಷೇತ್ರಗಳಿಗೂ ಅನ್ವಯಿಸಲಾಗುತ್ತದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3,218ಅಂಚೆ ಮತ್ತು ಸೇವಾ ಮತಗಳಿವೆ. ಅವುಗಳ ಪೈಕಿ ಸೇವಾ ಮತಗಳು ಇನ್ನೂ ಬರುತ್ತಿವೆ. ಮತ ಎಣಿಕೆಗೆ ‘ಡಿ’ ದರ್ಜೆಯವರನ್ನುಹೊರತುಪಡಿಸಿ392 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

ಅಭ್ಯರ್ಥಿಗಳು;13

ಒಟ್ಟು ಮತಗಳು;15.52ಲಕ್ಷ

ಚಲಾವಣೆಯಾದವು;11.49 ಲಕ್ಷ

ಶೇಕಡಾವಾರು;74.07

ಪ್ರಮುಖ ಸ್ಪರ್ಧಿಗಳು

ಪಕ್ಷ; ಹೆಸರು

ಬಿಜೆಪಿ; ಅನಂತಕುಮಾರ ಹೆಗಡೆ

ಜೆಡಿಎಸ್; ಆನಂದ ಅಸ್ನೋಟಿಕರ್

ಬಿಎಸ್‌ಪಿ; ಸುಧಾಕರ ಕೀರಾ ಜೋಗಳೇಕರ್

ಮತಗಟ್ಟೆಗಳ ವಿವರ

ಕ್ಷೇತ್ರ; ಮತಗಟ್ಟೆಗಳು; ಮತ ಎಣಿಕೆಯ ಸುತ್ತು

ಹಳಿಯಾಳ; 217;15

ಕಾರವಾರ;262;18

ಕುಮಟಾ;215;15

ಭಟ್ಕಳ;248;17

ಶಿರಸಿ;264;19

ಯಲ್ಲಾಪುರ;231;16

ಖಾನಾಪುರ;255;18

ಕಿತ್ತೂರು;230;16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT