ಮೋದಿ ಗೆಲುವಿಗೆ ವೈದಿಕರ ಪ್ರಾರ್ಥನೆ

7

ಮೋದಿ ಗೆಲುವಿಗೆ ವೈದಿಕರ ಪ್ರಾರ್ಥನೆ

Published:
Updated:
Deccan Herald

ಶಿರಸಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಪಡೆದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಎಂದು ಪ್ರಾರ್ಥಿಸಿ, ವೈದಿಕರೇ ಮುಂದಾಗಿ, ತಾಲ್ಲೂಕಿನ ಹುಳಗೋಳದಲ್ಲಿ ಶುಕ್ರವಾರ ಹೋಮ, ಹವನಾದಿಗಳನ್ನು ನಡೆಸಿದರು.

35ಕ್ಕೂ ಅಧಿಕ ವೈದಿಕರು ಅರುಣಸೂಕ್ತ ಹವನ, ಅಥರ್ವಶೀರ್ಷ ಹವನ, 108 ಗೃಹಶಾಂತಿ ನೆರವೇರಿಸಿದರು. ನಾಗರಾಜ ಭಟ್ಟ ಬೊಮ್ನಳ್ಳಿ, ಮಂಜುನಾಥ ಭಟ್ಟ ಯಲ್ಲಾಪುರ, ಜಿ.ಟಿ.ಭಟ್ಟ ಹುಳಗೋಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಜನರು ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಅನ್ನ ಸಂತರ್ಪಣೆಯ ವೆಚ್ಚವನ್ನು ಹುಳಗೋಳ ಊರವರು ಭರಿಸಿದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡರು.

‘ಮೋದಿ ಗೆಲುವಿಗೆ ಪ್ರಾರ್ಥಿಸಿ, ದೇಶದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸುಮಾರು 200 ವೈದಿಕರನ್ನೊಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ಇದ್ದು, ಅದರಲ್ಲಿ ನೇಪಾಳ, ಕಾಶಿ ಸೇರಿ ನಾನಾ ಭಾಗಗಳ ವೈದಿಕರು ಇದ್ದಾರೆ. ವೈದಿಕರೇ ಸ್ವಯಂ ಪ್ರೇರಣೆಯಿಂದ ಧಾರ್ಮಿಕ ಕಾರ್ಯ ನಡೆಸುತ್ತಿದ್ದಾರೆ. ಗ್ರೂಪ್‌ಗಳಲ್ಲಿ ಬರುವ ಸಲಹೆಯಂತೆ ಧಾರ್ಮಿಕ ಚಟುವಟಿಕೆ ನಡೆಯುತ್ತದೆ. ವಾರದ ಹಿಂದೆ ತಾಲ್ಲೂಕಿನ ಭೈರುಂಬೆಯಲ್ಲಿ ಇಂತಹುದೇ ಕಾರ್ಯಕ್ರಮ ನಡೆದಿತ್ತು’ ಎಂದು ವೈದಿಕರು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !