ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶುಲ್ಕ ಪಾವತಿಸಲು ಪಾಲಕರ ಮೇಲೆ ಒತ್ತಡ ಹೇರದಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ

Last Updated 24 ಜೂನ್ 2020, 13:46 IST
ಅಕ್ಷರ ಗಾತ್ರ

ಕಾರವಾರ:ನಗರದ ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿಸುವಂತೆ ಮಕ್ಕಳ ಪಾಲಕರ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿವೆ. ಇದರಿಂದ ಪಾಲಕರು ಆತಂಕಕ್ಕೆ ಒಳಗಾಗಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

ಜುಲೈ 6ರಂದು ಬೆಳಿಗ್ಗೆ9.30ರಿಂದ12.30 ಅವಧಿಯಲ್ಲಿಶುಲ್ಕ ಪಾವತಿಸಿ ಮಕ್ಕಳ ಪ್ರವೇಶಾತಿ ಮಾಡಿಸಿಕೊಳ್ಳಬೇಕು ಎಂದು ಸಂದೇಶದಲ್ಲಿ ಸೂಚಿಸಲಾಗಿದೆ. ಕೊರೊನಾ ಕಾರಣದಿಂದ ಆರ್ಥಿಕ ಬಿಕ್ಕಟ್ಟು ಇರುವ ಪಾಲಕರಿಗೆ,ಶುಲ್ಕ ಪಾವತಿಸುವಂತೆ ಖಾಸಗಿ ಶಾಲೆಗಳುಒತ್ತಡಹೇರಬಾರದು ಎಂದುಶಿಕ್ಷಣ ಸಚಿವರು ಆದೇಶಿಸಿದ್ದಾರೆ.

ಸರ್ಕಾರದ ಆದೇಶದಂತೆ ಶಾಲೆಯಲ್ಲಿ ಸಭೆ ನಡೆಸಿ ಪಾಲಕರ ಅಭಿಪ್ರಾಯವನ್ನೂಪಡೆದುಕೊಳ್ಳಲಾಗಿದೆ. ಆದರೂಖಾಸಗಿ ಶಾಲೆಗಳು ಪದೇ ಪದೇ ಮೊಬೈಲ್‌ಗೆ ಸಂದೇಶಕಳುಹಿಸಿ ಶುಲ್ಕ ಪಾವತಿಸಲು ಒತ್ತಡ ಹೇರುತ್ತಿವೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷದಿಲೀಪ್ ಜಿ ಅರ್ಗೇಕರ್, ಪ್ರಧಾನ ಕಾರ್ಯದರ್ಶಿರೋಶನ್ ಹರಿಕಂತ್ರ,ಉಪಾಧ್ಯಕ್ಷಸತೀಶ್ ಅರ್ಗೇಕರ್, ತಾಲ್ಲೂಕು ಘಟಕದ ಅಧ್ಯಕ್ಷಮೋಹನ್ ಉಳ್ವೇಕರ್ ಪ್ರಕಟಣೆಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT