ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಘೋಷಣೆಯ ಬಳಿಕ ನಾಟಕ ಕಲಾವಿದರ ಆದಾಯಕ್ಕೆ ಕುತ್ತು

ಜಾತ್ರೆ, ಬಂಡಿಹಬ್ಬ, ವಾರ್ಷಿಕೋತ್ಸವಗಳು ರದ್ದು
Last Updated 27 ಏಪ್ರಿಲ್ 2020, 12:38 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಸ್‌ನಹೊಡೆತವು ಜಿಲ್ಲೆಯ ವೃತ್ತಿಪರ ನಾಟಕ ಕಲಾವಿದರ ಮೇಲೆ ಭಾರಿ ಪರಿಣಾಮ ಬೀರಿದೆ. ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಬೇಡಿಕೆ ಬರುತ್ತಿದ್ದ ಸಮಯದಲ್ಲೇ ಲಾಕ್‌ಡೌನ್ ಘೋಷಣೆಯಾದ್ದರಿಂದಕಲಾವಿದರು ಆದಾಯವಿಲ್ಲದೇ ಪರದಾಡುವಂತಾಗಿದೆ.

ಡಿಸೆಂಬರ್‌ನಿಂದ ಮೇವರೆಗೆ ಕಾರವಾರದ ತಾಲ್ಲೂಕಿನಲ್ಲೇ100ಕ್ಕೂ ಅಧಿಕ ಸಣ್ಣಪುಟ್ಟ ಜಾತ್ರೆಗಳು, ಬಂಡಿಹಬ್ಬ, ವಾರ್ಷಿಕೋತ್ಸವಗಳು ಆಯೋಜನೆಯಾಗುತ್ತಿದ್ದವು. ಅಲ್ಲಿ ಕನ್ನಡ, ಕೊಂಕಣಿ ನಾಟಕಗಳ ಪ್ರದರ್ಶನ ಕಡ್ಡಾಯ ಎಂಬುದು ಅಲಿಖಿತ ನಿಯಮವಾಗಿದೆ. ಇದಕ್ಕೆ ವೃತ್ತಿಪರ ಕಲಾವಿದರನ್ನೇ ಕರೆಸುವುದು ವಾಡಿಕೆಯಾಗಿದೆ. ಇದೇರೀತಿ, ಯಕ್ಷಗಾನವನ್ನೂ ಆಯೋಜಿಸಲಾಗುತ್ತಿತ್ತು.

116 ಜನರಿಗೆ ಮಾಶಾಸನ:ಯಕ್ಷಗಾನ ಹಾಗೂ ರಂಗಭೂಮಿಯ, 60 ವರ್ಷ ದಾಟಿದ116ಕಲಾವಿದರುಜಿಲ್ಲೆಯಲ್ಲಿದ್ದಾರೆ. ಅವರಲ್ಲಿ12ವಿಧವೆಯರೂ ಸೇರಿದ್ದಾರೆ.ಎಲ್ಲರಿಗೂ ತಿಂಗಳಿಗೆ ₹ 2ಸಾವಿರದಂತೆ ಸರ್ಕಾರದಿಂದ ಮಾಸಾಶನ ನೀಡಲಾಗುತ್ತಿದೆ. ಆರು ಮಂದಿ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾಗಲುಕಾಯುತ್ತಿದ್ದಾರೆ.

ಬಡ ಕಲಾವಿದರಿಂದ ನೆರವು:ಲಾಕ್‍ಡೌನ್‌ನಿಂದತೊಂದರೆಗೀಡಾದ ಬಡ ಕಲಾವಿದರಿಗೆ ನೆರವು ನೀಡುವುದಾಗಿ ಸರ್ಕಾರವು ಈಗಾಗಲೇ ತಿಳಿಸಿದೆ. ಅದರಂತೆ ಅರ್ಹ ಕಲಾವಿದರುತಮ್ಮ ಹೆಸರು, ವಿಳಾಸ, ಆಧಾರ ಕಾರ್ಡ್ ಪ್ರತಿ,ಪಡಿತರ ಚೀಟಿ ಇದ್ದಲ್ಲಿ ಅದರ ಪ್ರತಿ, ಬ್ಯಾಂಕ್ ಮತ್ತು ಶಾಖೆಯ ಹೆಸರು, ಖಾತೆ ವಿವರ, ಐ.ಎಫ್‍.ಎಸ್‍.ಸಿ ಕೋಡ್ ವಿವರಗಳನ್ನು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ. ಈ ಎಲ್ಲ ವಿವರಗಳನ್ನು70190 98292ಗೆ ವಾಟ್ಸ್‌ಆ್ಯಪ್ ಮಾಡಬಹುದು.

80 ಸದಸ್ಯರ ವೇದಿಕೆ:ಕಾರವಾರದ ರಂಗಭೂಮಿ ಕಲಾವಿದರ ವೇದಿಕೆ ರಚನೆಯಾಗಿದ್ದು, 80 ಸದಸ್ಯರಿದ್ದಾರೆ. ಪಾತ್ರಧಾರಿಗಳ ಜೊತೆಗೇ ಹಾಡುಗಾರರು, ಹಾರ್ಮೋನಿಯಂ, ತಬಲಾ ನುಡಿಸುವವರು, ಬೆಳಕು, ಸೌಂಡ್ ಸಿಸ್ಟಂ ವ್ಯವಸ್ಥೆ ಮಾಡುವವರು, ಪರದೆ ಬಾಡಿಗೆ ನೀಡುವವರೂ ಸೇರಿದ್ದಾರೆ.

40ಕ್ಕೂ ಅಧಿಕ ಜನರು ಇದನ್ನೇ ವೃತ್ತಿಯನ್ನಾಗಿಸಿದ್ದಾರೆ. ಬೇಸಿಗೆಯಲ್ಲಿ ನಡೆಯುವ ನಾಟಕಗಳೇಅವರ ಇಡೀ ವರ್ಷದ ಆದಾಯಕ್ಕೆ ಆಸರೆಯಾಗಿದ್ದವು.ಆದರೆ, ಈ ಬಾರಿ ಲಾಕ್‍ಡೌನ್‍ನಿಂದ ಜಾತ್ರೆಗಳು, ಬಂಡಿ ಹಬ್ಬಗಳು ರದ್ದಾಗಿವೆ. ಹಾಗಾಗಿ ನಾಟಕ ಪ್ರದರ್ಶನಗಳುನಿಂತು ಹೋಗಿವೆ. ಇದರಿಂದ ಕಲಾವಿದರ ದುಡಿಮೆಗೆ ಕುತ್ತು ಬಂದಿದೆ.

***

ಕಾರವಾರದ ಹಲವು ಕಲಾವಿದರಿಗೆ ರಂಗಭೂಮಿಯೇಜೀವನಾಧಾರ. ಮಳೆಗಾಲದಲ್ಲಿ ಯಾವುದೇ ದುಡಿಮೆ ಇರುವುದಿಲ್ಲ. ಇದರಿಂದ ಇಡೀ ವರ್ಷ ಜೀವನಕ್ಕೆ ಕಷ್ಟ ಪಡಬೇಕಾಗಿದೆ.
- ಗಜಾನನ ನಾಯ್ಕ,ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ.

***

ಈ ವರ್ಷ ಬೇಸಿಗೆಯಲ್ಲಿ ನಿಗದಿಯಾಗಿದ್ದ ಕನಿಷ್ಠ 35 ನಾಟಕಗಳು ರದ್ದಾಗಿವೆ. ಇದರಿಂದ ನಮಗೆ ಪರದೆ ಬಾಡಿಗೆಯೂ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ.
- ಕೆನ್ಯಾ ಹಣಕೋಣ,ಕಾರವಾರದ ಕೊಂಕಣಿ ನಾಟಕ ಕಲಾವಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT